ವರದಿ- ಸಂತೋಷ ಬಡಕಂಬಿ
ಅಥಣಿ : ಅಥಣಿ ನಗರದ ಬಸವೇಶ್ವರ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ. ಬೈಕ್ ಗೆ ಪೆಟ್ರೋಲ್ ಹಾಕುವಾಗ ರೈತನಿಗೆ ವಂಚಿಸಿ ಕಡಿಮೆ ಪೆಟ್ರೋಲ್ ಹಾಕಲಾಗಿದೆ. ಪ್ರತಿನಿತ್ಯ ಇವರು ಹೀಗೆಯೇ ವಂಚಿಸುತ್ತಾರೆಂದು ಆರೋಪಿಸಿದ ವಿಡಿಯೋ ಒಂದು ಸಕತ್ ವೈರಲ್ ಆಗುತ್ತಿದೆ.
ಗ್ರಾಹಕರಿಂದ 510 ರೂ ತೆಗೆದುಕೊಂಡು ಅವರ ಕಣ್ಣಿಗೆ ಮಣ್ಣೆರೆಚಿ ಕೇವಲ 100 ರೂ ಪೆಟ್ರೋಲ್ ಹಾಕಿ ಗ್ರಾಹಕರಿಗೆ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಬೈಕ್ ಗೆ ಪೆಟ್ರೋಲ್ ಹಾಕುವ ಸಮಯದಲ್ಲಿ ರೈತನ ಜಾಗರೂಕತೆಯಿಂದ ಈ ಪೆಟ್ರೋಲ್ ವಂಚನೆ ಬೆಳಕಿಗೆ ಬಂದಿದ್ದು, ಎಚ್ಚೆತ್ತ ಗ್ರಾಹಕರು ಅಥಣಿಯ ಬಸವೇಶ್ವರ ಪೆಟ್ರೋಲ್ ಪಂಪ್ ವಿರುದ್ಧ ಕೆಂಡವಾಗಿದ್ದಾರೆ.
ದಿನೇದಿನೇ ಮೋದಿ ಜಿಎಸ್ ಟಿ ಹೆಚ್ಚಳ ಮಾಡುತ್ತಿದ್ದು, ನೀವು ಇಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ಈ ರೀತಿ ಮೋಸ ಮಾಡ್ತಿರಿ ಎಂದು ಅಲ್ಲಿದ್ದ ರೈತನೊಬ್ಬ, ಪ್ರಧಾನಿ ನರೇಂದ್ರ ಮೋದಿ ಹೆಚ್ಚಿಸಿರುವ ಜಿಎಸ್ ಟಿ ಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಗ್ರಾಹಕರಿಗೆ ವಂಚಿಸುವ ಇಂತಹ ಪೆಟ್ರೋಲ್ ಬಂಕ್ ಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಹಕರು ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
PublicNext
19/07/2022 09:35 am