ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದ್ದಕ್ಕಿದ್ದಂತೆ ಕುಸಿಯಿತು ವಿಧಾನಸೌಧ ಎದುರಿನ ರಸ್ತೆ: ಕಳಪೆ ಕಾಮಗಾರಿ ಎಂದ ಜನ

ಬೆಂಗಳೂರು: ವಿಧಾನಸೌಧ ಎದುರಿನ ರಸ್ತೆಯಲ್ಲಿ ಏಕಾಏಕಿ ಕುಸಿತ ಕಂಡಿದೆ. ದೊಡ್ಡ ರಂಧ್ರವೊಂದು ನಡುರಸ್ತೆಯಲ್ಲೇ ಕಾಣಿಸಿಕೊಂಡಿದ್ದು ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು.

ಸುರಂಗ ಮಾರ್ಗದ ಆಕಾರದಲ್ಲಿ ರಸ್ತೆ ಕುಸಿದಿದೆ. ಕೆಂಗಲ್ ಗೇಟ್ ಮುಂಭಾಗದಲ್ಲಿ ಕುಸಿದಿದ್ದು ಕಂಡಿದೆ. ಜಾಗ ಕುಸಿದಿದ್ದನ್ನು ಗಮನಿಸಿದ ಪೊಲೀಸರು ಕೂಡಲೇ ಅದರ ಸುತ್ತಲೂ ಬ್ಯಾರಿಕೇಡ್ ಹಾಕಿದ್ದಾರೆ. ಇದ್ದಕ್ಕಿದ್ದಂತೆ ರಸ್ತೆ ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ರೆ ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

Edited By : Nagaraj Tulugeri
PublicNext

PublicNext

17/09/2021 08:50 am

Cinque Terre

81.57 K

Cinque Terre

3