ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಿಂದ ಮುಂಬೈ ನಗರಕ್ಕೆ ಬರುತ್ತಿದ್ದ ವಿಮಾನದಲ್ಲಿ ಇದ್ದಕ್ಕಿಂದ್ದಂತೆ ಎ.ಸಿ ಕೈಕೊಟ್ಟಿದೆ. ಪರಿಣಾಮ ಮೂವರು ಪ್ರಯಾಣಿಕರು ಮೂರ್ಛೆ ಹೋಗಿದ್ದಾರೆ.
ಡೆಹ್ರಾಡೂನ್‌ನಿಂದ ಮುಂಬೈಗೆ ತೆರಳುತ್ತಿದ್ದ G8 2316 ಫ್ಲೈಟ್‌ನಲ್ಲಿ ವಿಮಾನದ ಕೂಲಿಂಗ್ ಕೈಕೊಟ್ಟಿದೆ. ಇದರಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ವೇಳೆ ಮೂವರು ಪ್ರಯಾಣಿಕರು ಮೂರ್ಛೆ ಹೋಗಿದ್ದು, ಕ್ಯಾನ್ಸರ್ ರೋಗಿಯೊಬ್ಬರಿಗೆ ಉಸಿರಾಟದ ಸಮಸ್ಯೆಯುಂಟಾಗಿದೆ. ಈ ವೇಳೆ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸಾ ಕಿಟ್ ಕೂಡ ಇರಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ರೋಶ್ನಿ ವಾಲಿಯಾ ಎಂಬುವರು ಹಂಚಿಕೊಂಡ ವೀಡಿಯೊದಲ್ಲಿ, ಪ್ರಯಾಣಿಕರು ಎದ್ದುನಿಂತು ತಮ್ಮ ಎಸಿ ವೆಂಟ್‌ಗಳನ್ನು ಪರಿಶೀಲಿಸುವುದನ್ನು ತೋರಿಸಿದೆ. ಇಲ್ಲಿ ಮಾತನಾಡಿರುವ ಮಹಿಳೆಯೊಬ್ಬರು, ʻನಮ್ಮ ಫ್ಲೈಟ್ 5.30 ಕ್ಕೆ ಟೇಕ್ ಆಫ್ ಆಯಿತು. ಅದರ 6 ಎ.ಸಿಗಳು ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಕ್ಯಾನ್ಸರ್ ರೋಗಿಯು ಉಸಿರಾಡಲು ಕಷ್ಟಪಡುತ್ತಿದ್ದಾರೆ. ಮೂವರು ಪ್ರಯಾಣಿಕರು ಶಾಖದಿಂದಾಗಿ ಮೂರ್ಛೆ ಹೋಗಿದ್ದಾರೆ. ಎ.ಸಿಗಳು ಕಾರ್ಯನಿರ್ವಹಿಸದಿದ್ದರೆ ವಿಮಾನ ಎಂದಿಗೂ ಟೇಕಾಫ್ ಆಗಬಾರದು. ಇದು “ಇಡೀ ವ್ಯವಸ್ಥೆಗೆ ನಾಚಿಕೆಗೇಡು” ಎಂದು ಟ್ವೀಟ್ ಮಾಡಿದ್ದಾರೆ.
PublicNext
26/06/2022 04:00 pm