ಬಿಹಾರ: ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಪುತ್ರನ ಶವ ಕೊಡಲು 50 ಸಾವಿರ ರೂಪಾಯಿ ಕೇಳಿದ್ದಾನೆ. ಬಡ ತಂದೆ ತಾಯಿ ಈಗ ಭಿಕ್ಷೆ ಬೇಡಿ ಆ ಹಣ ಹೊಂದಿಸುತ್ತಿದ್ದಾರೆ. ಆ ಒಂದು ಹೃದಯ ಸ್ಪರ್ಶಿ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.
ಭ್ರಷ್ಟಾಚಾರ ಅನ್ನೋದು ಎಲ್ಲೆಡೆ ತಾಂಡವ ಆಡುತ್ತಿದೆ. ಇದಕ್ಕೆ ಯಾರೂ ಹೊರತಾಗಿಲ್ಲ ಬಿಡಿ. ಅದರಂತೆ ಬಿಹಾರದ ಸಮಸ್ತಿಪುರದ ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ದಂಪತಿಯ ಮಗ ಮೃತಪಟ್ಟಿದ್ದಾನೆ. ಈತನ ಶವ ನೀಡಲು ಸಿಬ್ಬಂದಿ ನಿಕಾರಿಸಿದ್ದಾನೆ. 50 ಸಾವಿರ ರೂಪಾಯಿ ಕೊಟ್ರೆ ಮಾತ್ರ ಮೃತದೇಹ ಕೊಡೊದಾಗಿ ಹೇಳಿ ಕಳಿಸಿ ಬಿಟ್ಟಿದ್ದಾನೆ.
ದುಡ್ಡೇ ಇಲ್ಲದ ಈ ದಂಪತಿಗಳು ಮಗನ ಶವಕ್ಕಾಗಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದಾರೆ. 50 ಸಾವಿರ ಹೊಂದಿಸಲು ಹೀಗೆ ಪರದಾಡುತ್ತಲೇ ಇದ್ದಾರೆ. ಇವರ ಭಿಕ್ಷೆ ಬೇಡೋ ದೃಶ್ಯವೂ ವೈರಲ್ ಆಗಿದೆ. ಆದರೆ, ಇಲ್ಲಿವರೆಗೂ ಯಾರೂ ಸ್ಪಂದಿಸಿದಂತೆ ಕಾಣುತ್ತಿಲ್ಲ.
PublicNext
09/06/2022 07:16 pm