ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಅಥಣಿ ಗಡಿಭಾಗದಲ್ಲಿ ಜೋರಾಗಿದೆ ಅಕ್ರಮ ಅಕ್ಕಿ ಸಾಗಾಟ: ಸ್ಥಳೀಯರ ಆಕ್ರೋಶ

ಅಥಣಿ: ಅಥಣಿ ತಾಲೂಕಿನ‌ ಗಡಿಭಾಗಗಳಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟವಾಗುತ್ತಿದೆ. ಕತ್ತಲಾಗುತ್ತಿದ್ದಂತೆ ದಂಧೆಕೋರರು ಫುಲ್ ಆ್ಯಕ್ಟಿವ್ ಆಗಿ ಬಡವರ ಅಕ್ಕಿಯನ್ನು ಪಕ್ಕದ ಮಹಾರಾಷ್ಟ್ರದ ಪಾಲು ಮಾಡುತ್ತಿದ್ದಾರೆ. ಈ ದಂಧೆಯನ್ನು ತಡೆಯಬೇಕಿದ್ದ ಪೋಲಿಸ್ ಇಲಾಖೆ ವಿಫಲವಾಗಿದ್ದರಿಂದ ಸ್ಥಳೀಯರೇ ಸಾಗಾಟ ವಾಹನ ತಡೆದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಾರಾಷ್ಟ್ರದ ಗಡಿ ಹೊಂದಿರುವ ರಾಮತೀರ್ಥ, ಜಂಬಗಿ ಮಾರ್ಗವಾಗಿ ಕಾಳ ಸಂತೆಗೆ ಅನ್ನಭಾಗ್ಯದ ಅಕ್ಕಿಯನ್ನು ಬಡವರಿಂದ ಕಡಿಮೆ ಹಣಕ್ಕೆ ಖರೀದಿ ಮಾಡಿ ಮಹಾರಾಷ್ಟ್ರಕ್ಕೆ ರವಾನೆ ಮಾಡುತ್ತಿದ್ದಾರೆ ಈ ಕಳ್ಳರು.

ಬಡವರಿಂದ ಖರೀದಿಸಿದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಪಕ್ಕದ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುವ ಜಾಲ ತಾಲೂಕಿನಲ್ಲಿ ಸಕ್ರೀಯವಾಗಿದೆ, ಈ ಜಾಲನೋಡಿ ಬೇಸತ್ತ ಸ್ಥಳೀಯರೇ ಖುದ್ದಾಗಿ ಅಕ್ರಮ ಸಾಗಾಟನೆಯನ್ನು ತಡೆದು ಪ್ರಶ್ನೆ ಮಾಡಿರುವ ವಿಡಿಯೋಗಳು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ಲಾಗುತ್ತಿವೆ.

ನಿರಂತರವಾಗಿ ಗಡಿ ಭಾಗದಲ್ಲಿ ರಾಜಾ ರೋಷವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟವಾಗುತ್ತಿದ್ದರೂ ಕೂಡ ಅಥಣಿ ಹಾಗೂ ಐಗಳಿ ಪೋಲಿಸ್ ಠಾಣೆಯ ಪೋಲಿಸರು ಕಣ್ಣು ಮುಚ್ಚಿ ಕುಳಿತಿದ್ದಾರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Edited By :
PublicNext

PublicNext

24/08/2022 10:58 am

Cinque Terre

45.92 K

Cinque Terre

0

ಸಂಬಂಧಿತ ಸುದ್ದಿ