ಬೆಂಗಳೂರು: ಒಮಿಕ್ರಾನ್ ಸೋಂಕು ಹಾಗೂ ಕೊರೊನಾ ಮೂರನೇ ಅಲೆ ಉಲ್ಬಣ ಹಿನ್ನೆಲೆ ಸರ್ಕಾರ ಹಲವಾರು ಮಾರ್ಗಸೂಚಿಗಳನ್ನ ಜಾರಿ ಮಾಡಿದೆ. ಅದರಂತೆ ರಾಜಧಾನಿಯ ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸೋದನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ನಿನ್ನೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವ ಆರ್. ಅಶೋಕ್ ಮೆಟ್ರೋದಲ್ಲಿ ಹೆಚ್ಚಿನ ಜನರ ಸಂಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಸರ್ಕಾರವು ಮೆಟ್ರೊ ರೈಲುಗಳಲ್ಲಿ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಿದೆ. ನಿಂತು ಪ್ರಯಾಣಿಸಲು ಅನುಮತಿ ಇರುವುದಿಲ್ಲ. ಈ ಕುರಿತು ಮೆಟ್ರೊ ನಿಗಮದಿಂದ ಅಧಿಕೃತ ಮಾಹಿತಿ ಪ್ರಕಟವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
PublicNext
05/01/2022 12:03 pm