ಬೆಂಗಳೂರು: ಸುಮಾರು ಒಂಭತ್ತು ವರ್ಷಗಳ ಬಳಿಕ ಆಟೋ ಪ್ರಯಾಣ ದರ ಪರಿಷ್ಕರಣೆಯಾಗುತ್ತಿದೆ. ಮೊದಲ 2 ಕಿ.ಮೀ ವರೆಗೆ ಕನಿಷ್ಠ ಪ್ರಯಾಣ ದರ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಕನಿಷ್ಠ ಪ್ರಯಾಣ ದರದ ನಂತರದ ಪ್ರತಿ ಕಿಲೋ ಮೀಟರ್ ದರ 15 ರೂಪಾಯಿ ಹೆಚ್ಚಳವಾಗಿದೆ.
ದರದಲ್ಲಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಆಟೋ ಚಾಲಕರು ತಮ್ಮ ಆಟೋ ಮೀಟರ್‌ಗಳಿಗೆ ಬರುವ ಫೆಬ್ರವರಿ 28ರೊಳಗೆ ಸಾರಿಗೆ ಅಧಿಕಾರಿಗಳಿಂದ ಪ್ರಮಾಣೀಕರಿಸಿಕೊಂಡು ಮತ್ತೆ ಮುದ್ರೆ ಹಾಕಿಸಿಕೊಳ್ಳಬೇಕಾಗಿದೆ. ಪರಿಷ್ಕರಣೆ ದರ ಪ್ರಯಾಣಿಕರಿಂದ ನೋಡಲು ಸಿಗುವಂತೆ ಪ್ರದರ್ಶಿಸಬೇಕು. ರಾತ್ರಿ 10 ಗಂಟೆಯ ನಂತರ ಪ್ರಯಾಣ ಮಾಡುವವರು ಪ್ರಯಾಣ ವೆಚ್ಚದ ಒಂದೂವರೆ ಪಟ್ಟು ಪಾವತಿ ಮಾಡಬೇಕಾಗುತ್ತದೆ.
ಕಾಯುವಿಕೆಯ ದರ ಮೊದಲ 5 ನಿಮಿಷ ಉಚಿತವಾಗಿರುತ್ತದೆ. ನಂತರ ಪ್ರತಿ ನಿಮಿಷಕ್ಕೆ 5 ರೂಪಾಯಿ ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತ. 20 ಕೆ.ಜಿ.ಯಿಂದ 50 ಕೆ.ಜಿ.ವರೆಗೆ 5 ರೂಪಾಯಿ ನಿಗದಿಪಡಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ಆಟೋ ಪ್ರಯಾಣ ದರ ಸಾಮಾನ್ಯ ದರ ಜತೆಗೆ ಅರ್ಧ ಪಟ್ಟು ಹೆಚ್ಚಳವಾಗುತ್ತದೆ.
PublicNext
01/12/2021 10:50 am