ಮುಂಬೈ: ರತನ್ ಟಾಟಾ ಸಂಸ್ಥೆಗೆ ಏರ್ ಇಂಡಿಯಾ ಬಂದಿದ್ದೇ ತಡ. ಏರ್ ಇಂಡಿಯಾಗೆ ಬೇರೆ ಥರದ ಗತ್ತೇ ಈಗ ಬಂದು ಬಿಟ್ಟಿದೆ. ಅದೇ ಖುಷಿಯಲ್ಲಿಯೇ ಇಲ್ಲಿಯ ಹೆಸರಾಂತ ಬೇಕರಿಯಿಂದ ರತನ್ ಟಾಟಾ ಅವರಿಗೆ ಏರ್ ಇಂಡಿಯಾ ವಿಮಾನ ರೂಪದ ಪುಟ್ಟ ಕೇಕ್ ಗಿಫ್ಟ್ ಆಗಿ ಬಂದಿದೆ.
ಏರ್ ಇಂಡಿಯಾ ಬಿಡ್ ಅಲ್ಲಿ ರತನ್ ಟಾಟಾ 18 ಸಾವಿರ ಕೋಟಿ ಕೊಟ್ಟು ಏರ್ ಇಂಡಿಯಾ ವನ್ನ ತಮ್ಮ ಸಂಸ್ಥೆಗೆ ತೆಗೆದುಕೊಂಡು ಬಂದಿದ್ದಾರೆ. ಹಾಗೆ ಏರ್ ಇಂಡಿಯಾ ಈ ಸಂಸ್ಥೆಗೆ ಬಂದ ಕೂಡಲೇ,ರತನ್ ಟಾಟಾ ಅವರಿಗೆ ಶುಭಾಯಗಳ ಸುರಿಮಳೆನೆ ಆಗಿದೆ. ಅದಕ್ಕೂ ಹೆಚ್ಚಾಗಿ, 1928 ರಲ್ಲಿ ನವಾಜ್ಬಾಯಿ ಟಾಟಾ ಆರಂಭಿಸಿದ್ದ ಬೇಕರಿಯಿಂದಲೇ ವಿಶೇಷ ಕೇಕ್ ಗಿಫ್ಟ್ ರೂಪದಲ್ಲಿ ರತನ್ ಟಾಟಾ ಅವರಿಗೆ ಬಂದಿದೆ. ಅದರ ಫೋಟೋವನ್ನ ಇನ್ ಸ್ಟಾರದಲ್ಲೂ ರತನ್ ಟಾಟಾ ಹಂಚಿಕೊಂಡು ಕಳಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ.
PublicNext
13/10/2021 04:31 pm