ಬೆಂಗಳೂರು: ಭಾರತೀಯ ಮೂಲದ ಮೆಸೆಂಜರ್ ಆ್ಯಪ್ ಆಗಿರುವ ಟೆಲಿಗ್ರಾಮ್, ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ತನ್ನ ಪ್ರತಿಸ್ಪರ್ಧಿ ವಾಟ್ಸ್ ಆ್ಯಪ್ ಪರಿಚಯಿಸಲು ಮುಂದಾಗಿದ್ದ ಖಾಸಗಿತನ ನೀತಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಟೆಲಿಗ್ರಾಂ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ.
ಸೆನ್ಸರ್ ಟವರ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜನವರಿ 2021ರಲ್ಲಿ ಟೆಲಿಗ್ರಾಂ 6.3 ಕೋಟಿಗೂ ಅಧಿಕ ಇನ್‌ಸ್ಟಾಲ್ ಕಂಡಿದೆ. ಇದು ಇದೇ ಅವಧಿಯಲ್ಲಿ ಕಳೆದ ವರ್ಷ ಇದ್ದ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚು ಎನ್ನುವುದು ಗಮನಾರ್ಹ. 2020ರ ಡಿಸೆಂಬರ್‌ನಲ್ಲಿ ಟೆಲಿಗ್ರಾಂ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್ ಪೈಕಿ 9ನೇ ಸ್ಥಾನದಲ್ಲಿತ್ತು.
ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲೂ ಟೆಲಿಗ್ರಾಂ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
PublicNext
08/02/2021 07:51 am