ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅತ್ಯುತ್ತಮ ಸಾಧನೆಗೈದ ಇಂಜಿನಿಯರ್ ಗಳಿಗೆ ರಾಜ್ಯ ಮಟ್ಟದ ಎಕ್ಸ್‌ ಲೆನ್ಸಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಆಧುನಿಕ ಪ್ರಪಂಚ ನಿರ್ಮಾಣದಲ್ಲಿ ಇಂಜಿನಿಯರ್ ಗಳ ಪಾತ್ರ ಬಹು ಮುಖ್ಯ. ನವನವೀನ ಪರಿಕಲ್ಪನೆ ವಿನ್ಯಾಸಗೊಳಿಸುವುದು, ಅಭಿವೃದ್ಧಿ ಪಡಿಸುವುದು ಮತ್ತು ಕಾರ್ಯಗತಗೊಳಿಸುವ ಕಾಯಕದಲ್ಲಿ ಇಂಜಿನಿಯರ್ ಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇಂಜಿನಿಯರ್ ಗಳು ಇತರ ಕ್ಷೇತ್ರಗಳ ಪರಿಣತರೊಂದಿಗೆ ಕೈಜೋಡಿಸಿ ಸಮಕಾಲೀನ ಸಮಾಜದ ಸಂಕೀರ್ಣ ಸವಾಲುಗಳಿಗೆ ಸುಸ್ಥಿರ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಆವಿಷ್ಕರಿಸುವ ಮೂಲಕ ಭವಿಷ್ಯದ ತಲೆಮಾರನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಇಂಜಿನಿಯರ್ ಗಳಿಗೆ ಮೀಡಿಯಾ ವಿಷನ್ ಬೆಂಗಳೂರು ಹಾಗೂ ಬಸವ ಪರಿಷತ್ ಸಂಸ್ಥೆಯ ಸಹಯೋಗದೊಂದಿಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಭಾಗಿತ್ವದಲ್ಲಿ ಅತ್ಯುತ್ತಮ ಸಾಧನೆಗೈದ ಇಂಜಿನಿಯರ್ ಗಳಿಗೆ ' ಇಂಜಿನಿಯರಿಂಗ್ ಎಕ್ಸ್‌ ಲೆನ್ಸಿ - 2024 ' ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಪ. ಜಗದ್ಗುರು ವೇದಾಂತಾಚಾರ್ಯ, ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಭಾಗಿಯಾಗಿದ್ದು, ಅತಿಥಿಗಳಾಗಿ ಡಿ.ಎಸ್. ಮ್ಯಾಕ್ಸ್ ನಿರ್ದೇಶಕ, ಎಸ್ಪಿ ದಯಾನಂದ್, ಬೆಸ್ಕಾಂ ಮುಖ್ಯ ಅಭಿಯಂತರ ಶಿವಪ್ರಕಾಶ್, ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಹಾಗೂ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ಮಾಜಿ ಸದಸ್ಯ ಹೆಚ್. ಮೊಹಮದ್ ಗೌಸ್ ಭಾಗಿಯಾಗಿದ್ದರು.

ಬಳಿಕ ಅತಿಥಿಗಳು ಹಾಗೂ ಪ್ರಶಸ್ತಿ ಪಡೆದ ಗಣ್ಯರು ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿದರು.

ಒಟ್ಟಾರೆ, ಇಂಜಿನಿಯರಿಂಗ್ ಎಕ್ಸ್‌ ಲೆನ್ಸಿ - 2024 ಪ್ರಶಸ್ತಿ ಪ್ರದಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಂತಹ ಕಾರ್ಯಕ್ರಮ ಆಧುನಿಕ ಪ್ರಪಂಚದ ನಿರ್ಮಾಣದಲ್ಲಿ ತೊಡಗಿರುವ ಹಾಗೂ ನವ ಇಂಜಿನಿಯರ್‌ ಗಳಿಗೆ ಸ್ಫೂರ್ತಿದಾಯಕವಾಗಿದೆ.

Edited By : Suman K
PublicNext

PublicNext

28/10/2024 06:31 pm

Cinque Terre

96.55 K

Cinque Terre

1