ನವದೆಹಲಿ: ದೇಶಾದ್ಯಂತ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ಪೂರ್ಣ ಪ್ರಮಾಣದ ವಿದ್ಯುತ್ ಬಿಕ್ಕಟ್ಟನ್ನು ತಪ್ಪಿಸುವ ಪ್ರಯತ್ನದಲ್ಲಿ ದೇಶಾದ್ಯಂತ ಕಲ್ಲಿದ್ದಲು ಪೂರೈಕೆಗೆ ಭಾರತವು ಕೆಲವು ಪ್ರಯಾಣಿಕ (ಪ್ಯಾಸೆಂಜರ್) ರೈಲುಗಳನ್ನು ರದ್ದುಗೊಳಿಸಿದೆ.
ದೇಶದ ಶೇ. 70ರಷ್ಟು ವಿದ್ಯುತ್ ಉತ್ಪಾದನೆಯ ಮೂಲ ಕಲ್ಲಿದ್ದಲು. ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ಭಾರತದ ಹಲವಾರು ಭಾಗಗಳು ದೀರ್ಘಾವಧಿಯ ಕತ್ತಲನ್ನು ಎದುರಿಸುತ್ತಿವೆ. ಹೀಗಾಗಿ ಪ್ಯಾಸೆಂಜರ್ ರೈಲುಗಳ ಮಾರ್ಗಗಳಲ್ಲಿ ಕಲ್ಲಿದ್ದಲು ದಾಸ್ತಾನು ಹೊತ್ತ ರೈಲುಗಳ ಸುಗಮ ಸಂಚಾರಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ರೈಲ್ವೆ ವಲಯದ ಮೇಲೂ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಬೀರಿದ್ದು, ಪ್ರಯಾಣಿಕ ರೈಲುಗಳ ಅವಧಿಯನ್ನು ಕಡಿತಗೊಳಿಸಲಾಗಿದ್ದು, ಕೆಲವೆಡೆ ರದ್ದುಗೊಳಿಸಲಾಗಿದೆ. ಸದ್ಯ ಈ ಕ್ರಮವು ತಾತ್ಕಾಲಿಕವಾಗಿದ್ದು, ಪರಿಸ್ಥಿತಿ ಸಾಮಾನ್ಯಸ್ಥಿತಿಗೆ ಮರಳಿದ ತಕ್ಷಣ ಪ್ರಯಾಣಿಕರ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ ಎಂದು ಏಷ್ಯಾದ ಅತಿದೊಡ್ಡ ನೆಟ್‌ವರ್ಕ್‌ಗಳಲ್ಲಿ ಒಂದಾದ ಭಾರತೀಯ ರೈಲ್ವೆಯ ಕಾರ್ಯನಿರ್ವಾಹಕ ನಿರ್ದೇಶಕ ಗೌರವ್ ಕೃಷ್ಣ ಬನ್ಸಾಲ್ ಹೇಳಿದ್ದಾರೆ.
PublicNext
29/04/2022 09:11 pm