ನವದೆಹಲಿ: ಕಚ್ಚಾ ತಾಳೆ ಎಣ್ಣೆ, ಸೂರ್ಯಕಾಂತಿ ಹಾಗೂ ಸೋಯಾ ಎಣ್ಣೆ ಮೇಲಿನ ಕಸ್ಟಮ್ಸ್ ಸುಂಕವನ್ನು ಕೇಂದ್ರ್ ಸರ್ಕಾರ ರದ್ದುಗೊಳಿಸಿದೆ. ಹಾಗೂ ಕೃಷಿ ಸೆಸ್ ಕಡಿಗೊಳಿಸಿದೆ.
2022ರ ಮಾರ್ಚ್ 31ರವರೆಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಕೃಷಿ ಸೆಸ್ ಅನ್ನು ಕಡಿತಗೊಳಿಸಿರುವ ಕ್ರಮವು ಹಬ್ಬಗಲ ಸಮಯದಲ್ಲಿ ಬೆಲೆಗಳನ್ನು ತಗ್ಗಿಸಲು ಮತ್ತು ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಸುಂಕ ಕಡಿತವು ಅಕ್ಟೋಬರ್ 14ರಿಂದ ಜಾರಿಗೆ ಬರಲಿದ್ದು, ಮಾರ್ಚ್ 31, 2022 ರವರೆಗೆ ಜಾರಿಯಲ್ಲಿರುತ್ತದೆ ಎಂದು ಪರೋಕ್ಷ ತೆರಿಗೆಮತ್ತು ಕೇಂದ್ರೀಯ ಕಸ್ಟಮ್ಸ್ ಮಂಡಳಿ(ಸಿಬಿಐಸಿ) ಅಧಿಸೂಚನೆಯಲ್ಲಿ ತಿಳಿಸಿದೆ.
PublicNext
14/10/2021 08:23 am