ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2 ವರ್ಷಗಳಲ್ಲಿ ಗರಿಷ್ಟ ಮಟ್ಟಕ್ಕೇರಿದ ಪೆಟ್ರೋಲ್ ಡೀಸೆಲ್ ಬೆಲೆ

ಬೆಂಗಳೂರು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ಕಾರಣದಿಂದ ಕಳೆದ ಐದು ದಿನಗಳಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗುತ್ತಲೇ ಇದೆ. ಇಂದು ಕೂಡ ಪೆಟ್ರೋಲ್ ಬೆಲೆ 28 ಪೈಸೆ ಮತ್ತು ಡೀಸೆಲ್ ಬೆಲೆ 29 ಪೈಸೆ ಏರಿಕೆ ಕಂಡಿದೆ.

ಬೆಂಗಳೂರಲ್ಲಿ ಪೆಟ್ರೋಲ್ ದರ ₹86.20,ಡೀಸೆಲ್ ₹78.03ಕ್ಕೆ ಏರಿದೆ. ನವೆಂಬರ್ 20 ರಿಂದ ತೈಲ ಕಂಪನಿಗಳು ನಿತ್ಯ ದರ ಪರಿಷ್ಕರಣೆ ಆರಂಭಿಸಿದ ನಂತರ 14 ಬಾರಿ ತೈಲ ದರ ಏರಿಕೆ ಕಂಡಿದ್ದು, ಕಳೆದ 5 ದಿನಗಳಿಂದ ಸತತ ಏರಿಕೆ ಆಗುತ್ತಿದೆ. ಹೀಗಾಗಿ, ಸದ್ಯದ, ಪೆಟ್ರೋಲ್, ಡೀಸೆಲ್ ದರ ಸೆಪ್ಟೆಂಬರ್ 2018ರಿಂದೀಚೆಗೆ ಗರಿಷ್ಠ ಮಟ್ಟದ್ದಾಗಿದೆ.

Edited By : Nagaraj Tulugeri
PublicNext

PublicNext

06/12/2020 08:46 pm

Cinque Terre

167.23 K

Cinque Terre

26

ಸಂಬಂಧಿತ ಸುದ್ದಿ