ಹುಬ್ಬಳ್ಳಿ: ಜನವರಿಯಿಂದ ಹುಬ್ಬಳ್ಳಿಯಿಂದ ಅಹಮದಾಬಾದ್, ತಿರುಪತಿ, ಬೆಂಗಳೂರು, ಕೊಚ್ಚಿ, ಗೋವಾ, ಹೈದರಾಬಾದ್ ಮತ್ತು ನವದೆಹಲಿಗೆ ವಿಮಾನ ಸೇವೆ ಪ್ರಾರಂಭವಾಗಲಿದೆ.
ಲಾಕ್ ಡೌನ್ ಜಾರಿಯಾದ ನಂತರ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಜನವರಿಯಿಂದ ಪುನರ್ ಆರಂಭವಾಗಲಿದೆ.
ಇಂಡಿಗೊ, ಸ್ಟಾರ್ ಏರ್ ಮತ್ತು ಟ್ರೂ ಜೆಟ್ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಯಿಂದ ಇತರ ನಗರಗಳಿಗೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ನೆರವಾಗಲಿವೆ.
ಹುಬ್ಬಳ್ಳಿ - ಅಹಮದಾಬಾದ್ ನಡುವೆ ಜನವರಿ 4 ರಿಂದ ಇಂಡಿಗೊ ಏರ್ ಲೈನ್ಸ್ ವಿಮಾನ ಸೇವೆಯನ್ನು ಆರಂಭಿಸಲಿದೆ.
ಈ ಮಾರ್ಗದಲ್ಲಿ ವಿಮಾನ ಸೇವೆ ಪುನರ್ ಆರಂಭಕ್ಕೆ ತೀವ್ರವಾದ ಬೇಡಿಕೆ ಇತ್ತೆಂದು ಖಚಿತ ಮೂಲಗಳು ತಿಳಿಸಿವೆ.
ಕೊಚ್ಚಿ- ಹುಬ್ಬಳ್ಳಿ, ಗೋವಾ: ಜನವರಿ ಎರಡನೇ ವಾರದಿಂದ ಕೇರಳ, ಗೋವಾ ಮತ್ತು ಹುಬ್ಬಳ್ಳಿಯನ್ನು ಸಂಪರ್ಕಿಸುವ ವಿಮಾನ ಸೇವೆಯನ್ನು ಇಂಡಿಗೋ ಆರಂಭಿಸುತ್ತಿದೆ.
ನವದೆಹಲಿಗೆ ನೂತನ ವಿಮಾನ ಆರಂಭಿಸುವ ಪ್ರಸ್ತಾವವಿದೆ. ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ವಿಮಾನ ಸೇವೆ ಆರಂಭಿಸುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಸಕ್ತಿ ಹೊಂದಿದ್ದಾರೆ.
ಸಂಬಂಧಿತ ಇಲಾಖೆಗಳ ಅನುಮತಿ ಪಡೆದ ಬಳಿಕ ಮಾರ್ಚ್ ನಲ್ಲಿ ಈ ಮಾರ್ಗದಲ್ಲಿ ಇಂಡಿಗೊ ವಿಮಾನ ಸೇವೆ ಆರಂಭಿಸುವ ಸಾಧ್ಯತೆಯಿದೆ.
ಈ ಮಧ್ಯೆ ಹುಬ್ಬಳಿ-ಬೆಂಗಳೂರು ಮತ್ತು ಹುಬ್ಬಳ್ಳಿ- ಹೈದ್ರಾಬಾದ್ ನಡುವೆ ವಿಮಾನಗಳ ಕಾರ್ಯಾಚರಣೆಗೆ ಟ್ರೂ ಜೆಟ್ ಕಂಪನಿ ಅನುಮತಿ ಪಡೆದುಕೊಂಡಿದೆ.
PublicNext
25/12/2020 09:13 pm