ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಬೆಂಗಳೂರಿಗರಿಗೆ ವಿದ್ಯುತ್‌ ಜೊತೆ ಕಸಕ್ಕೂ ಬಿಲ್‌- ಯಾರಿಗೆ ಎಷ್ಟು ಶುಲ್ಕ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಿವಾಸಿಗಳು ಇನ್ನುಮುಂದೆ ಕಸಕ್ಕೂ ಶುಲ್ಕ ಪಾವತಿಸಬೇಕಾಗುತ್ತದೆ.

ಹೌದು. ಬಿಬಿಎಂಪಿ ರೂಪಿಸಿರುವ ಕಸ ನಿರ್ವಹಣೆ ನಿರ್ವಹಣೆ ಉಪ ನಿಯಮ 2020 ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಶುಲ್ಕವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಬೆಸ್ಕಾಂಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮನೆ ಮಾತ್ರವಲ್ಲದೇ ಐಷಾರಾಮಿ ಹೋಟೆಲ್, ಕಲ್ಯಾಣ ಮಂಟಪ, ಅಪಾರ್ಟ್‌ಮೆಂಟ್‌ಗಳಿಗೆ ವಿವಿಧ ಶುಲ್ಕವನ್ನು ನಿಗದಿ ಮಾಡಲಾಗಿದೆ. ಪ್ರತಿ ಮನೆಗೆ ತಿಂಗಳಿಗೆ ರೂ.200 ಕಸದ ಶುಲ್ಕ ನಿಗದಿ ಪಡಿಸಲಾಗುತ್ತಿದೆ. ಈ ನಿಯಮ 2021ರ ಜನವರಿ 1ರಿಂದ ಜಾರಿಗೆ ಬರಲಿದೆ.

ಯಾರಿಗೆ ಎಷ್ಟು ಶುಲ್ಕ?:

ವಸತಿ ಕಟ್ಟಡ:

ಸಾವಿರ ಚದರಡಿಗೆ 10 ರೂ.

1001ರಿಂದ 3000 ಚದರಡಿಗೆ 30 ರೂ.

3000ಕ್ಕೂ ಮೇಲ್ಪಟ್ಟ ಚದರಡಿಗೆ 50 ರೂ.

ಹೋಟೆಲ್, ಆಸ್ಪತ್ರೆ ಸೇರಿದಂತೆ ವಾಣಿಜ್ಯ ಕಟ್ಟಡ:

1,000 ಚದರಡಿಗೆ 50 ರೂ.

1001ರಿಂದ 5000 ಚದರಡಿಗೆ 100 ರೂ.

5000ಕ್ಕೂ ಮೇಲ್ಪಟ್ಟ ಚದರಡಿಗೆ 200 ರೂ.

ಕೈಗಾರಿಕಾ ಕಟ್ಟಡ:

1000 ಚದರಡಿಗೆ 50 ರೂ.

1001ರಿಂದ 5000 ಚದರಡಿಗೆ 200 ರೂ.

5000ಕ್ಕೂ ಮೇಲ್ಪಟ್ಟ ಚದರಡಿಗೆ 300 ರೂ.

Edited By : Vijay Kumar
PublicNext

PublicNext

16/12/2020 05:34 pm

Cinque Terre

50.54 K

Cinque Terre

1

ಸಂಬಂಧಿತ ಸುದ್ದಿ