ಬೆಂಗಳೂರು- ಸಾರಿಗೆ ನೌಕರರ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದೆ. ಇನ್ನೊಂದೆಡೆ ಬಸ್ ಇಲ್ಲದೇ ಸಾರ್ವಜನಿಕರ ಪರದಾಟವೂ ಹೆಚ್ಚಾಗಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರೆಡೆ ಬಸ್ ರೋಡಿಗಿಳಿಯುತ್ತಿಲ್ಲ. ಹೀಗಾಗಿ ಸಾಮಾನ್ಯ ಪ್ರಯಾಣಿಕರ ಕಷ್ಟ ಹೇಳತೀರದಾಗಿದೆ. ಖಾಸಗಿ ಬಸ್ ಕೂಡ ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಟ್ಯಾಕ್ಸಿ ಅಥವಾ ಬಾಡಿಗೆ ಕಾರು ಹಿಡಿದು ಊರು ಸೇರುತ್ತಿದ್ದಾರೆ. ಸರ್ಕಾರಿ ಬಸ್ಸನ್ನೇ ನಂಬಿಕೊಂಡವರು ಬಸ್ ನಿಲ್ದಾಣದಲ್ಲೇ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಹಾಗೂ ಸಾರಿಗೆ ನೌಕರ ನಡುವೆ ನಾನಾ? ನೀನಾ? ಎಂಬ ಹೋರಾಟ ನಡೆದೇ ಇದೆ.
PublicNext
14/12/2020 07:50 am