ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭದ್ರತೆಯ ಮಧ್ಯೆ ಬಸ್ ಸಂಚಾರ ಶುರು

ಬೆಂಗಳೂರು : ಸಾರಿಗೆ ನೌಕರರು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಮೂರು ದಿನಗಳಿಂದ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ನಡೆಸುತ್ತಿದ್ದಾರೆ.

ಹಾಗಾಗಿ ಸಂಚಾರಕ್ಕಾಗಿ ಜನ ಪರದಾಡುತ್ತಿದ್ದಾರೆ ಇದರ ಮಧ್ಯೆ ಇಂದು ಕೆಲವೆಡೆ ಪೊಲೀಸ್ ಭದ್ರತೆಯಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಪೊಲೀಸ್ ಎಸ್ಕಾರ್ಟ್ ಭದ್ರತೆಯೊಂದಿಗೆ ಬಸ್ ಸಂಚಾರ ಆರಂಭಿಸಿದ್ದರಿಂದ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೆಲವೆಡೆ ಬಿಎಂಟಿಸಿ ಬಸ್ ಸಂಚಾರ ಮಾಡಿವೆ.ಬಹುತೇಕ ಬಸ್ ನಿಲ್ದಾಣಗಳು ಬಸ್ ಗಳಿಲ್ಲದೆ, ಬಣಗುಡುತ್ತಿದ್ದವು.

ಭಾನುವಾರದ ರಜಾದಿನವಾದ ಇಂದು ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿತ್ತು.

ಆದರೂ, ದೈನಂದಿನ ಕೆಲಸಗಳಿಗೆ, ತುರ್ತು ಕಾರ್ಯಗಳಿಗೆ ತೆರಳುವವರು ಪರದಾಡುವಂತಾಯಿತು. ಬಸ್ಗಳ ಅಭಾವದಿಂದ ಪರ್ಯಾಯ ವಾಹನಗಳ ಮೂಲಕ ಬಹುತೇಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Edited By : Nirmala Aralikatti
PublicNext

PublicNext

13/12/2020 02:12 pm

Cinque Terre

68.55 K

Cinque Terre

0

ಸಂಬಂಧಿತ ಸುದ್ದಿ