ಬೆಂಗಳೂರು: ಲಾಕ್ ಡೌನ್ ನಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಕಷ್ಟು ಅಲ್ಲೋಲ ಕಲ್ಲೋಲ್ಲವೇ ಸೃಷ್ಠಿಯಾಗಿದೆ.
ಸಾಂಕ್ರಾಮಿಕ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ ಕಾಲೇಜುಗಳನ್ನು ಬಂದ್ ಮಾಡಿತು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿದೆ.
ಸದ್ಯ ಲಾಕ್ ಡೌನ್ ನಲ್ಲಿ ಸಾಕಷ್ಟು ಸಡಿಲಿಕೆಯನ್ನು ತರಲಾಗಿದೆ ಹಾಗಾಗಿ ಐಟಿ ಕ್ಷೇತ್ರದ ವರ್ಕ್ ಫ್ರಂ ಹೋಮ್ ಕೊನೆಯಾಗಲಿ ಎಂದು ಶಾಸಕರು ವಿಧಾನಸಭೆಯಲ್ಲಿ ಗುರುವಾರ ಒತ್ತಾಯಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಐಟಿ ಕ್ಷೇತ್ರಕ್ಕೆ ಪೂರಕವಾದ ಕ್ಷೇತ್ರಗಳಿಗೆ ಭಾರಿ ಪೆಟ್ಟು ಬೀಳುತ್ತಿದೆ.
ಐಟಿ ಕಚೇರಿಗಳು ಆರಂಭವಾಗದೆ ಇರುವುದರಿಂದ ಕ್ಯಾಬ್ ಸೇವೆ, ಕಟ್ಟಡಗಳು ಸೇರಿ ವಿವಿಧ ಉದ್ಯಮಕ್ಕೆ ತೊಡಕಾಗಿದೆ.
ಎಲ್ಲವೂ ಅನ್ ಲಾಕ್ ಆಗುತ್ತಿರುವಾಗ ಐಟಿ ವರ್ಕ್ ಫ್ರಂ ಹೋಮ್ ನಿಯಮವನ್ನೂ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಇದಕ್ಕುತ್ತರಿಸಿದ ಡಿಸಿಎಂ ಅಶ್ವತ್ಥನಾರಾಯಣ, ಸದ್ಯಕ್ಕೆ ಒತ್ತಡ ಹಾಕಲು ಬರಲ್ಲ. ಒತ್ತಾಯ ಮಾಡುವ ಪ್ರಮೇಯವೇ ಇಲ್ಲ.
ಕೊರೊನಾ ಸೋಂಕಿನ ಕಾರಣಕ್ಕೆ ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಸೋಂಕು ಕಡಿಮೆಯಾದ ಮೇಲೆ ಎಲ್ಲವೂ ಸರಿಯಾಗಲಿದೆ ಎಂದರು.
PublicNext
11/12/2020 07:24 am