ಬೆಂಗಳೂರು: ರಿಯಲ್ ಎಸ್ಟೇಟ್ ಬಿಲ್ಡರ್‌ಗಳು ಗ್ರಾಹಕರಿಗೆ ವಂಚಿಸುವ ಪ್ರಕರಣಗಳಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ.
ಹೌದು, ಪ್ರಾಧಿಕಾರದಲ್ಲಿ ನೋಂದಣಿಯಾಗಿರಲಿ, ಇಲ್ಲದಿರಲಿ ರೇರಾ ರೂಲ್ಸ್ ಬ್ರೇಕ್ ಮಾಡಿದರೆ ಬಿಲ್ಡರ್‌ಗಳು ಜೈಲು ಸೇರುವುದು ಖಚಿತವಾಗಿದೆ. ರೇರಾದಲ್ಲಿ ನೋಂದಣಿಯಾಗದ ಯೋಜನೆಗಳಲ್ಲಿ ಸಾವಿರಾರು ಗ್ರಾಹಕರು ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಸುಮಾರು 1040 ಯೋಜನೆಗಳು ರೇರಾದಲ್ಲಿ ನೋಂದಣಿಯೇ ಆಗಿಲ್ಲ. ಈ ಯೋಜನೆಗಳಲ್ಲಿ ಹಣ ಹೂಡಿದ ಗ್ರಾಹಕರಿಂದ 4,800 ದೂರುಗಳು ದಾಖಲಾಗಿವೆ. ಹೀಗಾಗಿ ಕೂಡಲೇ ಯೋಜನೆಗಳನ್ನು ನೋಂದಣಿ ಮಾಡಿಕೊಳ್ಳದಿದ್ದರೆ ಕಾನೂನು ಕ್ರಮಕೈಗೊಳ್ಳುವುದಾಗಿ ರೇರಾ ಪ್ರಾಧಿಕಾರ ಕಾರ್ಯದರ್ಶಿ ಲತಾ ಕುಮಾರಿ ಹೇಳಿದ್ದಾರೆ.
ಮೋಸ ಹೋಗುವ ಮುನ್ನ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು. ಯೋಜನೆಯು ರೇರಾದಲ್ಲಿ ನೋಂದಣಿಯಾಗಿದೆಯಾ ಎಂಬುದನ್ನ ಮೊದಲು ಗ್ರಾಹಕರು ಖಚಿತ ಪಡಿಸಿಕೊಳ್ಳುವುದು ಉತ್ತಮ ಎಂದು ಲತಾ ಕುಮಾರಿ ತಿಳಿಸಿದ್ದಾರೆ.
PublicNext
08/12/2020 03:16 pm