ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಡದಿ ಘಟಕದಲ್ಲಿ ಟೊಯೊಟಾ ಕೆಲಸ ಸ್ಥಗಿತ

ನವದೆಹಲಿ : ಬಗೆ ಹರಿಯದ ಕೆಲವು ವಿವಾದಗಳಿಂದಾಗಿ ಜಪಾನ್ ಮೂಲದ ಟೊಯೊಟಾ ಕಂಪೆನಿ ಬಿಡದಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಮತ್ತೆ ಕೆಲಸ ಸ್ಥಗಿತಗೊಳಿಸಿದೆ.

ಕಾರ್ಮಿಕ ಸಂಘಟನೆ ಮತ್ತು ವ್ಯವಸ್ಥಾಪಕರ ಮಧ್ಯೆ ಇರುವ ಭಿನ್ನಾಭಿಪ್ರಾಯ ಬಗೆಹರಿಯದಿರುವ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಿದೆ.

ನ. 23ರಿಂದ ಜಾರಿಗೆ ಬರುವಂತೆ ಕರ್ನಾಟಕದ ಬಿಡದಿಯಲ್ಲಿರುವ ಉತ್ಪಾದನೆ ಘಟಕವನ್ನು ಸ್ಥಗಿತಗೊಳಿಸದೆ ವ್ಯವಸ್ಥಾಪಕ ಮಂಡಳಿಗೆ ಬೇರೆ ದಾರಿಯಿಲ್ಲ, ಸದ್ಯದಲ್ಲಿಯೇ ವಿವಾದ ಬಗೆಹರಿಯುವ ಲಕ್ಷಣವಿದೆ.

ಕಾರ್ಮಿಕ ಸಂಘಟನೆ ಜೊತೆ ನಿರಂತರ ಮಾತುಕತೆಯಲ್ಲಿದ್ದೇವೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಇತ್ತೀಚೆಗೆ ಬಿಡದಿಯಲ್ಲಿ ಪರಿಸ್ಥಿತಿ ತೀವ್ರ ಬಿಗಡಾಯಿಸಿತ್ತು. ಕಾರ್ಮಿಕ ಸಂಘಟನೆಯ ಕೆಲ ಸದಸ್ಯರು ಅನಧಿಕೃತವಾಗಿ ಮುಷ್ಕರ ಮಾಡುವುದು, ಇತರ ಸದಸ್ಯರಿಗೆ ಅಗೌರವ ತೋರಿಸುವುದು ಇತ್ಯಾದಿ ಮಾಡುತ್ತಿದ್ದರು.

ಕೆಲಸ ಮಾಡುವ ಸದಸ್ಯರಿಗೆ ಬೆದರಿಕೆ ಹಾಕುವುದು, ಪ್ರಚೋದನೆ ಮಾಡುವ ಘಟನೆಗಳು ಕೂಡ ನಡೆದಿವೆ. ಕಂಪೆನಿಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದರು.

ಇದರಿಂದಾಗಿ ಲಾಕ್ ಡೌನ್ ಮುಗಿದು ಪುನಃ ಘಟಕ ಆರಂಭಗೊಂಡ ಮೇಲೆ ಕೆಲಸ ಮುಂದುವರಿಸಲಾಗದೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ.

ಈ ತಂಡದ ಸದಸ್ಯರ ಇಂತಹ ಪ್ರತಿಕೂಲ ಚಟುವಟಿಕೆಗಳು ಕಾರ್ಖಾನೆಯ ಆವರಣದ ಸುತ್ತಲೂ ಬಾಷ್ಪಶೀಲ ಪರಿಸ್ಥಿತಿ ಮತ್ತು ಕಂಪನಿಯ ಇತರ ಉದ್ಯೋಗಿಗಳಿಗೆ ಅಸುರಕ್ಷಿತ ಪರಿಸ್ಥಿತಿಗಳನ್ನು ಸೃಷ್ಟಿಸಿವೆ, ಎಂದು ಕಂಪೆನಿ ಹೇಳಿಕೆ ತಿಳಿಸಿದೆ.

Edited By : Nirmala Aralikatti
PublicNext

PublicNext

25/11/2020 02:49 pm

Cinque Terre

80.31 K

Cinque Terre

1

ಸಂಬಂಧಿತ ಸುದ್ದಿ