ಲಂಡನ್- ಬ್ರಿಟಿಷ್ ರಾಯಲ್ ಫ್ಯಾಮಿಲಿ ಮನೆ ಕೆಲಸದವರಿಗಾಗಿ ಹುಡುಕಾಡುತ್ತಿದೆ. ಆರಂಭಿಕವಾಗಿ ಸರಿಯಾಗಿ ₹18.5 ಲಕ್ಷ ಸಂಬಳ ನೀಡೋದಾಗಿ ಘೋಷಿಸಿದೆ.
ಈ ಬಗ್ಗೆ ರಾಯಲ್ ಹೌಸ್ ಹೋಲ್ಡ್ ಎಂಬ ಅಂತರ್ಜಾಲ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 2 ಹಂತದ ತರಬೇತಿ ಅವಧಿಯ ಕೆಲಸ ಇದಾಗಿದೆ. ಆಯ್ದ ಅಭ್ಯರ್ಥಿಗಳು ಮಾತ್ರ ವಿಂಡ್ಸರ್ ಕ್ಯಾಸ್ಟಲ್ ನಲ್ಲಿ ವಾಸಿಸಬೇಕಿದೆ ಎಂದು ತಿಳಿಸಲಾಗಿದೆ. ಮತ್ತು ವಾರದಲ್ಲಿ 5ದಿನ ಕೆಲಸ ಮಾಡಬೇಕು.
ಕೆಲಸ ಮಾಡುವವರಿಗೆ ಅರಮನೆಯಿಂದಲೇ ಊಟ ಹಾಗೂ ಉಚಿತ ವಸತಿ ಸೌಲಭ್ಯ ದೊರೆಯಲಿದೆ. ನೇಮಕವಾದ ಕೆಲಸಗಾರರನ್ನು ವೃತ್ತಿಪರ ಕೆಲಸಗಾರರೊಂದಿಗೆ ಇರಿಸಲಾಗುತ್ತದೆ. ಒಳಾಂಗಣ ಮತ್ತು ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಾಗೂ ಕಾಳಜಿ ವಹಿಸಲು ನೀವು ಅವರೊಂದಿಗೆ ಕೆಲಸ ಮಾಡುವಾಗ ಕಲಿಯುತ್ತೀರಿ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
PublicNext
10/11/2020 07:54 am