ಭಾರತೀಯ ಬಾಹ್ಯಕಾಶ ವಿಜ್ಞಾನಿಗಳು ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಈ ಬಾರಿ ಒಂದೇ ಸಮಯಕ್ಕೆ ಬರೋಬ್ಬರಿ 10 ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಿದ್ದಾರೆ. ಈ ಎಲ್ಲ ಉಪಗ್ರಹಗಳು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿವೆ.
ಇಸ್ರೋ ವಿಜ್ಞಾನಿಗಳ ಈ ಕಾರ್ಯಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇಓಎಸ್ -01 ಹಾಗೂ 9 ವಿದೇಶಿ ಉಪಗ್ರಹಗಳನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಈ ಹಿನ್ನಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.
PublicNext
07/11/2020 08:01 pm