ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಮ್ಸ್ ಆಸ್ಪತ್ರೆಗೆ ೨೦೦ ವೆಂಟಿಲೇಟರ್ ಕೊಟ್ಟ ಕಂಪನಿ

ಹುಬ್ಬಳ್ಳಿ, ನವೆಂಬರ್ 05: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಮಯದಲ್ಲಿ ಉತ್ತಮ ಸೇವೆ ನೀಡಿ ಮೆಚ್ಚುಗೆ ಪಡೆದಿದ್ದ ಕಿಮ್ಸ್ ಆಸ್ಪತ್ರೆಯಲ್ಲಿ ನಂತರ ವೆಂಟಿಲೇಟರ್ ಕೊರತೆ ಸಮಸ್ಯೆ ಬಹುವಾಗಿ ಕಾಡಿತ್ತು. ಈ ಕಾರಣವಾಗಿ ಪ್ರತಿದಿನವೂ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಿತ್ತು. ಆದರೆ ಈ ಸಮಸ್ಯೆಗೀಗ ಶಾಶ್ವತ ಪರಿಹಾರ ಸಿಕ್ಕಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿ ಮೇರೆಗೆ ಏಕಸ್ ಎಂಬ ಖಾಸಗಿ ಕಂಪನಿ ಕಿಮ್ಸ್ ಗೆ 200 ಪೋರ್ಟೆಬಲ್ ವೆಂಟಿಲೇಟರ್ ಗಳನ್ನು ನೀಡಿದೆ. ಜಿಲ್ಲೆಯಲ್ಲಿ ಸದ್ಯಕ್ಕೀಗ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಪ್ರಸ್ತುತ ಕೊರೊನಾ ರಹಿತ ಬೇರೆ ರೋಗಿಗಳಿಗೆ ಈ ವೆಂಟಿಲೇಟರ್ ಗಳನ್ನು ಬಳಕೆ ಮಾಡಿಕೊಳ್ಳಲು ಕಿಮ್ಸ್ ತೀರ್ಮಾನಿಸಿದೆ. ಜೊತೆಗೆ ಮುಂದೆ ದಾಖಲಾಗುವ ಸೋಂಕಿತರಿಗೆ ವೆಂಟಿಲೇಟರ್ ಸಮಸ್ಯೆ ಇರುವುದಿಲ್ಲ. ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ಕಿಮ್ಸ್ ನಲ್ಲಿ ವೆಂಟಿಲೇಟರ್ ಕೊರತೆ ಇತ್ತು. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ರೋಗಿಗಳಿಗೆ ಬೆಡ್ ಗಳು ಕೂಡ ಸಿಗುತ್ತಿರಲಿಲ್ಲ. ಈ ಕುರಿತು ಕಿಮ್ಸ್ ಆಡಳಿತ ಮಂಡಳಿ ಸರ್ಕಾರದ ಗಮನಕ್ಕೆ ತಂದರೂ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದ ಸರಣಿ ಸಾವುಗಳೇ ಸಂಭವಿಸಿದ್ದವು. ಸದ್ಯಕ್ಕೆ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ ಈ ಕೆಲಸ ಮುಂಚಿತವಾಗಿ ಆಗಿದ್ದರೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು. ಕೋವಿಡ್ ಸಂದರ್ಭದಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳು ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ ಸಹಾಯ ಮಾಡಿವೆ. ಕೋಲ್ ಇಂಡಿಯಾ 5 ಕೋಟಿ ರೂ, ಐಒಸಿಎಲ್ 50 ಲಕ್ಷ, ಏಕಸ್ ನಾಲ್ಕು ವೆಂಟಲೇಟರ್ ಗಳನ್ನು ಕಿಮ್ಸ್ ಗೆ ನೀಡಿತ್ತು. ಇದೀಗ ಸಂಸ್ಥೆ ತಾನೇ ತಯಾರಿಸಿರುವ 200 ಪೋರ್ಟೆಬಲ್ ವೆಂಟಿಲೇಟರ್ ಗಳನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

05/11/2020 06:14 pm

Cinque Terre

41.88 K

Cinque Terre

0

ಸಂಬಂಧಿತ ಸುದ್ದಿ