ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ದೆಹಲಿಯ ಗಡಿಭಾಗ ಗಾಜಿಪುರದಿಂದ ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದಾರೆ.
ನಮಗೆ ಪೊಲೀಸರು ಅನುಮತಿ ನೀಡಿದ್ದಾರೋ, ಇಲ್ಲವೋ ನಾವು ಟ್ರ್ಯಾಕ್ಟರ್ ಮೆರವಣಿಗೆ ಹೋಗುತ್ತೇವೆ ಎಂದು ಟ್ರ್ಯಾಕ್ಟರ್ ಗಳನ್ನು ರಸ್ತೆಗಿಳಿಸಿಯೇ ಬಿಟ್ಟಿದ್ದಾರೆ. ಸರದಿ ಸಾಲಿನಲ್ಲಿ ರೈತರು ಸಾಗುತ್ತಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯ ಮೇಲೆ ರೈತರ rally ಅನುಮತಿಯಿದ್ದರೂ ಕೂಡ ಅದಕ್ಕೂ ಮೊದಲೇ ಹೊರಟಿದ್ದರಿಂದ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ನುಗ್ಗಿ ರೈತರು ಬಂದಿದ್ದರಿಂದ ಘರ್ಷಣೆಯ ವಾತಾವರಣ ಉಂಟಾಯಿತು.
ಇನ್ನು ಸಿಂಘು ಮತ್ತು ಟಿಕ್ರಿ ಗಡಿಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಮುರಿದು ಹೋಗಲು ಪ್ರಯತ್ನಿಸಿದವರ ಮೇಲೆ ಪೊಲೀಸರು ಅಶ್ರವಾಯು, ಲಾಠಿಚಾರ್ಜ್ ಪ್ರಯೋಗಿಸಿದ ಪ್ರಸಂಗ ನಡೆದಿದೆ. ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಮುಗಿದ ಬಳಿಕವಷ್ಟೆ ತಮಗೆ ಟ್ರ್ಯಾಕ್ಟರ್ ನಲ್ಲಿ ಹೋಗಲು ಅನುಮತಿ ನೀಡಲಾಗಿದೆ ಎಂದು ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅವರ ಮಾತು ಕೇಳದೆ ಮುನ್ನುಗ್ಗಿದ್ದರಿಂದ ಪೊಲೀಸರು ಅಶ್ರುವಾಯು, ಲಾಠಿಚಾರ್ಜ್ ನಡೆಸಿದ ಪ್ರಸಂಗ ನಡೆಯಿತು.
PublicNext
26/01/2021 12:32 pm