ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ ಜಿಲ್ಲೆಯಲ್ಲಿ ಉತ್ತಮ ಮಳೆ : ಬಹುತೇಕ ಕೆರೆ ಭರ್ತಿ

ಕೋಲಾರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೋಲಾರದ ಬಹುತೇಕ ಕೆರೆಗಳು ಕೋಡಿ ಹರಿಯುತ್ತಿವೆ. ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಕೋಲಾರಮ್ಮ ಕೆರೆ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೋಡಿ ಕಣ್ಣೂರು ಹಾಗೂ ಗದ್ದೆ ಕಣ್ಣೂರು ಭಾಗದ ಮುಖ್ಯ ರಸ್ತೆ ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ಅಡಚನೆಯಾಗಿದೆ.

ಕೆ.ಸಿ ವ್ಯಾಲಿ ನೀರಿನ ಜೊತೆ ಮಳೆ ನೀರು ಸೇರಿಕೊಂಡು ಜಿಲ್ಲೆಯ ಪ್ರಮುಖ ಕೆರೆಗಳು ಬಹುತೇಕ ಭರ್ತಿಯಾಗಿದ್ದು,ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಪಾತಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟ 200 ಅಡಿ ಏರಿಕೆ ಆಗಿದೆ.ಆದ್ರೆ ಗದ್ದೆ ಕಣ್ಣೂರು ಭಾಗದಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗಿರುವ ಪರಿಣಾಮ ರಾಗಿ,ತೊಗರಿ ಬೆಳೆ ಹಾಕಿದ್ದ ರೈತರಿಗೆ ಆತಂಕ ಎದುರಾಗಿದೆ.

ಇನ್ನು ಕೋಲಾರ ನಗರದಲ್ಲಿ ರಾಜಕಾಲುವೆ ಒತ್ತುವರಿ ಜೊತೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಹಮತ್ ನಗರ, ರೈಲ್ವೆ ಬ್ರಿಡ್ಜ್ ಸೇರಿದಂತೆ ಹಲವು ತಗ್ಗು ಪ್ರದೇಶ ಹಾಗೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ವರದಿ : ರವಿ ಕುಮಾರ್, ಕೋಲಾರ.

Edited By :
PublicNext

PublicNext

02/08/2022 08:06 pm

Cinque Terre

28.79 K

Cinque Terre

0