ಪ್ರವೀಣ ನಾರಾಯಣ ರಾವ್
ಬೆಂಗಳೂರು- ಎದುರಿನಿಂದ ಕಾರಿನಂತಿದ್ದರೂ ಕಾರ್ ಅಲ್ಲಾ.ಹಿಂದಿನಿಂದ ಬೈಕ್ ನಂತೆ ಕಂಡರೂ ಬೈಕ್ ಅಲ್ಲಾ. ಮೂರು ಚಕ್ರದ ವಾಹನವಾದರೂ ಆಟೋರಿಕ್ಷಾ ಅಲ್ಲ.. ಇನ್ನೂ ಮಜಾ ಅಂದ್ರೆ ಇದು ಪೆಟ್ರೋಲ್, ಡೀಸೆಲ್ ನಿಂದ ಓಡೋದೂ ಇಲ್ಲಾ..!
ಸಂಪೂರ್ಣ ಪರಿಸರ ಸ್ನೇಹಿಯಾಗಿರುವ ಈ ವಾಹನ ಓಡೋದು ಇಲೆಕ್ಟ್ರಿಕ್ ಚಾಜ್೯ ನ ಮೂಲಕ..! ಇಷ್ಟೆಲ್ಲಾ ವಿಶೇಷತೆಯನ್ನು ಹೊಂದಿರುವ ಹೀಗೊಂದು ಕ್ಯೂಟ್ ವೆಹಿಕಲ್ ಕಂಡು ಬಂದಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಏರ್ಪಡಿಸಿರುವ ವಸ್ತುಪ್ರದರ್ಶನ ಮಳಿಗೆಯಲ್ಲಿ.. ಇದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಕೂಡಾ ಆಗಿದೆ.
ಹುಬ್ಬಳ್ಳಿ ಮೂಲದ SPOTTER ಕಂಪನಿಯವರು ಸಿದ್ಧಪಡಿಸಿರುವ ಈ ವಾಹನವನ್ನು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿದ್ಧಪಡಿಸಲಾಗಿದೆ.. ಇದಿನ್ನೂ ಪ್ರೋಟೋ ಟೈಪ್ ನಲ್ಲಿದ್ದು ವಾಹನ ಪೂರ್ಣ ಪ್ರಮಾಣದಲ್ಲಿ ಸಿದ್ಧವಾದ ಬಳಿಕ 2 ರಿಂದ 3 ಲಕ್ಷದ ತನಕ ಬೆಲೆ ನಿಗದಿ ಮಾಡಬಹುದಾಗಿದೆ ಎಂದು ಕಂಪನಿಯವರು ಹೇಳುತ್ತಾರೆ. ಬ್ಯಾಟರಿ ಚಾಲಿತವಾಗಿರುವುದರಿಂದ ಒಮ್ಮೆ ಚಾಜ್೯ ಮಾಡಿದ್ರೆ 150 ಕಿ.ಮೀ. ಮೈಲೇಜ್ ಕೊಡುವ ರೀತಿಯಲ್ಲಿ ರೂಪಿಸಲಾಗಿದೆ.
PublicNext
03/11/2022 08:59 pm