ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣಿ ಕಾರ್ಮಿಕರಿಗೆ ಸಿಕ್ಕ ವಜ್ರಗಳು: ಕುಬೇರರಾಗುವ ಖುಷಿಯಲ್ಲಿ ಕಾರ್ಮಿಕರು

ಪನ್ನಾ- ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರದ ಗಣಿಯಲ್ಲಿ ಇಬ್ಬರು ಕಾರ್ಮಿಕರಿಗೆ ವಜ್ರಗಳು ದೊರೆತಿವೆ. ಒಂದು ವಜ್ರ 7.44 ಕ್ಯಾರೆಟ್ ನದ್ದಾಗಿದೆ. ಇನ್ನೊಂದು ವಜ್ರ 14.98 ಕ್ಯಾರೆಟ್ ನದ್ದಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಜ್ರ ಪರಿಶೋಧಕ ಅನುಪಮ್ ಸಿಂಗ್ ಸಿಕ್ಕಿರುವ ವಜ್ರಗಳನ್ನು ಇಬ್ಬರೂ ಕಾರ್ಮಿಕರು ವಜ್ರ ಕಚೇರಿಗೆ ಒಪ್ಪಿಸಿದ್ದಾರೆ‌‌. ಇವುಗಳನ್ನು ಹರಾಜು ಹಾಕಲಾಗುವುದು. ಇದರಲ್ಲಿ ಶೇಕಡಾ 12.5 ರಾಯಧನ ಕಡಿತ ಮಾಡಿ ಉಳಿದ ಹಣವನ್ನು ಕಾರ್ಮಿಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. 7.44 ಕ್ಯಾರೆಟ್ ವಜ್ರದ ಬೆಲೆ ಸುಮಾರು 30 ಲಕ್ಷ‌. 14.98 ಕ್ಯಾರೆಟ್ ವಜ್ರದ ಬೆಲೆ ಅದರ ಎರಡು ಪಟ್ಟು ಹೆಚ್ಚಾಗಬಹುದು ಎನ್ನಲಾಗಿದೆ.

ಈ ಬೆಲೆ ಕೇಳಿಕೆ ಗಣಿಯಲ್ಲಿ ದುಡಿಯುವ ಬಡ ಕಾರ್ಮಿಕರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅವರು ತಮ್ಮ ಬದುಕಿನ ಸಂಕಷ್ಟ ಕಳೆಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

03/11/2020 10:21 pm

Cinque Terre

89.14 K

Cinque Terre

16

ಸಂಬಂಧಿತ ಸುದ್ದಿ