ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದಾನಿ ತೆಕ್ಕೆಗೆ ಮಂಗಳೂರು ಏರ್ ಪೋರ್ಟ್

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ ಮಧ್ಯರಾತ್ರಿಯಿಂದ ಅಧಿಕೃತವಾಗಿ ಅದಾನಿ ಒಡೆತನದ ಕಂಪನಿಗೆ ಹಸ್ತಾಂತರವಾಗಿದೆ.

ಈ ಮೂಲಕ ಇನ್ನು ಮುಂದೆ ಈ ನಿಲ್ದಾಣದ ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆ ಅದಾನಿ ಕಂಪನಿಗೆ ಸೇರಿದ್ದಾಗಿದೆ.

ಈ ಹಿಂದೆ ಅಕ್ಟೋಬರ್‌ 31ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆಯನ್ನು ಅದಾನಿ ಗ್ರೂಪ್‌ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಅದರಂತೆ ಶುಕ್ರವಾರ ಮಧ್ಯರಾತ್ರಿಯೇ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ನವೆಂಬರ್‌ 2 ಮತ್ತು 11 ರಂದು ಲಖನೌ ಮತ್ತು ಅಹಮದಾಬಾದ್‌ ವಿಮಾನ ನಿಲ್ದಾಣದ ನಿರ್ವಹಣೆಯೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅದಾನಿ ಏರ್‌ಪೋರ್ಟ್ ಕಂಪನಿಗೆ ಹಸ್ತಾಂತರವಾಗಲಿದೆ.

Edited By : Nagaraj Tulugeri
PublicNext

PublicNext

31/10/2020 08:03 pm

Cinque Terre

47.18 K

Cinque Terre

29

ಸಂಬಂಧಿತ ಸುದ್ದಿ