ಮುಂಬೈ: ಜನದಟ್ಟನೆಗೆ ಹೆಸರುವಾಸಿಯಾದ ಮುಂಬೈನಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ನಾಲ್ಕು ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗಿದೆ.
ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಅನುಮತಿ ನೀಡಿದ ಬೆನ್ನಲ್ಲೇ ಪಶ್ಚಿಮ ರೈಲ್ವೆ ವಿಭಾಗವು ಮುಂಬೈ ಮತ್ತು ಉಪನಗರಗಳ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ನಾಲ್ಕು ‘ಮಹಿಳಾ ವಿಶೇಷ’ ರೈಲುಗಳ ವ್ಯವಸ್ಥೆ ಮಾಡಿದೆ.
ಸದ್ಯ ಪಶ್ಚಿಮ ಮತ್ತು ಕೇಂದ್ರ ರೈಲ್ವೆ ವಿಭಾಗದ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಮಹಿಳಾ ಪ್ರಯಾಣಿಕರಿಗೆ ಅನುಮತಿ ನೀಡಲಾಗಿದೆ.
ಪಶ್ಚಿಮ ವಿಭಾಗವು ನಾಲ್ಕು ಮಹಿಳಾ ವಿಶೇಷ ರೈಲುಗಳನ್ನು ಸೇರ್ಪಡೆಗೊಳಿಸಿದ್ದು, ಮಹಿಳಾ ಪ್ರಯಾಣಿಕರಿಗಾಗಿ ಒಟ್ಟು ಆರು ರೈಲುಗಳು ಸಂಚರಿಸಲಿವೆ.
ಕೇಂದ್ರ ಮತ್ತು ಪಶ್ಚಿಮ ರೈಲ್ವೆ ವಿಭಾಗದ ಸ್ಥಳೀಯ ರೈಲುಗಳಲ್ಲಿ ಎಲ್ಲಾ ಮಹಿಳಾ ಪ್ರಯಣಿಕರಿಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಮತ್ತು ಸಂಜೆ 7 ಗಂಟೆ ಬಳಿಕ ಪ್ರಯಾಣಿಸಲು ರೈಲ್ವೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ.
PublicNext
21/10/2020 01:29 pm