ಮಡಿಕೇರಿ: ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಕೊಡಗಿನ ಯೋಧ ಉತ್ತರಾಖಂಡ್ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತಾಕೇರಿ ಮೂಲದ ಎನ್.ಸಿ.ಮಹೇಶ್ (46) ಮೃತ ಯೋಧ ಎಂದು ತಿಳಿದು ಬಂದಿದೆ. ಮಹೇಶ್ ಅವರು ಉತ್ತರಾಖಂಡ್‌ನ ಜೋಷಿಮತ್ತ್ ಎಂಬಲ್ಲಿ JCO ಆಗಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಬಂದು ಹೋಗಿದ್ರು. ಇನ್ನು 4 ವರ್ಷದಲ್ಲಿ ನಿವೃತ್ತಿ ಹೊಂದಲಿದ್ದರು. 22 ವರ್ಷದಿಂದ ಭಾರತೀಯ ಸೇನೆಯಲ್ಲಿದ್ದ ಮಹೇಶ್, ಬೆಂಗಳೂರು ಹೈದ್ರಾಬಾದ್, ಜಮ್ಮು ಮತ್ತು ಕಾಶ್ಮೀರ್, ಉತ್ತರಾಖಂಡ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಹುಟ್ಟೂರು ತಾಕೇರಿಗೆ ಯೋಧನ ಪಾರ್ಥಿವ ಶರೀರ ಆಗಮಿಸಿರೋ ನಿರೀಕ್ಷೆ ಇದೆ.
ಮೃತ ಯೋಧ ಪತ್ನಿ, ಓರ್ವ ಪುತ್ರಿ (10) ಹಾಗೂ ಓರ್ವ ಪುತ್ರನನ್ನು (6) ಅಗಲಿದ್ದಾರೆ.
PublicNext
12/10/2022 09:20 am