ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡಿಯೂರಿ, ತಲೆಬಾಗಿ ದೇವರಿಗೆ ವಿಶೇಷ ನಮನ ಸಲ್ಲಿಸಿದ ಮೇಕೆ

ಲಕ್ನೋ: ಮೇಕೆಯೊಂದು ಮನುಷ್ಯರಂತೆ ದೇವರಿಗೆ ಭಕ್ತಿಭಾವದಿಂದ ತಲೆಬಾಗಿ ಶರಣಾದ ಅಪರೂಪದ ಪ್ರಸಂಗ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರೆವಾರಿ ಕಮೆಂಟ್ ಮಾಡುತ್ತಿದ್ದಾರೆ.

ಕಾನ್ಪುರ ಜಿಲ್ಲೆಯ ಬಾಬಾ ಆನಂದೇಶ್ವರ ದೇಗುಲದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಜಾನ್ಸನ್ ಎಂಬುವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಕಪ್ಪು ಬಣ್ಣದ ಆಡೊಂದು ದೇಗುಲದಲ್ಲಿ ಸೇರಿರುವ ಇತರ ಭಕ್ತರ ಜೊತೆ ತಾನು ಕೂಡ ದೇವರಿಗೆ ಭಕ್ತಿಯ ನಮನ ಸಲ್ಲಿಸಿದೆ. ತನ್ನ ಮುಂಭಾಗದ ಎರಡು ಕಾಲುಗಳನ್ನು ಮಡಚಿ ತಲೆಯನ್ನು ಹಾಗೂ ಭುಜವನ್ನು ಬಾಗಿಸಿ ದೇವರ ಗುಡಿ ಮುಂದೆ ತಿಂದು ಭಕ್ತಿ ಸಮರ್ಪಿಸಿದೆ.

Edited By : Vijay Kumar
PublicNext

PublicNext

11/10/2022 05:50 pm

Cinque Terre

26.31 K

Cinque Terre

2