ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಾಮಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ನಿಧನ

ನವದೆಹಲಿ : ಬದ್ರಿನಾಥ್ ಜ್ಯೋತಿರ್ಮಠ ಮತ್ತು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ, ಸ್ವಾಮಿ ಸ್ವರೂಪಾನಂದ ಸರಸ್ವತಿ (99) ಅವರು ಭಾನುವಾರ ನಿಧನರಾದರು. ಅವರು ಮಧ್ಯಪ್ರದೇಶದ ನರಸಿಂಗಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಮಾಹಿತಿಯ ಪ್ರಕಾರ, ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಆಶ್ರಮದಲ್ಲಿ ನಿಧನರಾಗಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಅವರು ತಮ್ಮ 99ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದರು.

2 ಸೆಪ್ಟೆಂಬರ್ 1924 ರಂದು ಜನಿಸಿದ್ದ ಅವರು ಹಿಂದೆ ದ್ವಾರಕಾ ಮತ್ತು ಜ್ಯೋತಿರ್ಮಠದ ಶಂಕರಾಚಾರ್ಯರಾಗಿದ್ದರು.

ಶಂಕರಾಚಾರ್ಯ ಸ್ವರೂಪಾನಂದರು ಕೂಡ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅವರ ಬಾಲ್ಯದ ಹೆಸರು ಪೋತಿರಾಮ್. ಅವರು ಕಾಶಿಯಲ್ಲಿ ಕರ್ಪಾತ್ರಿ ಮಹಾರಾಜರಿಂದ ಧರ್ಮ ಶಿಕ್ಷಣವನ್ನು ಕಲಿತಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಅವರೂ ಚಳವಳಿಗೆ ಧುಮುಕಿದ್ದರು. ಇದಕ್ಕಾಗಿ ಅವರಿಗೆ ಎರಡು ಬಾರಿ ಜೈಲಿಗೆ ಹೋಗಬೇಕಾಯಿತು. 1989ರಲ್ಲಿ ಶಂಕರಾಚಾರ್ಯ ಎಂಬ ಬಿರುದು ಪಡೆದರು.

ರಾಮ ಜನ್ಮಭೂಮಿ ನ್ಯಾಸ್ ಹೆಸರಿನಲ್ಲಿ ರಾಮಮಂದಿರದ ಹೆಸರಿನಲ್ಲಿ ವಿಎಚ್ ಪಿ ಮತ್ತು ಬಿಜೆಪಿ ಕಚೇರಿ ನಿರ್ಮಿಸುತ್ತಿದೆ ಎಂದು ಶಂಕರಾಚಾರ್ಯ ಸ್ವಾಮಿ ಸ್ಪರುಪಾನಂದ ಸರಸ್ವತಿ ಆರೋಪಿಸಿದ್ದರು. ದೇವಸ್ಥಾನಕ್ಕೆ ಧಾರ್ಮಿಕ ಸ್ವರೂಪ ಇರಬೇಕು, ಆದರೆ ಈ ಜನ ಅದಕ್ಕೆ ರಾಜಕೀಯ ರೂಪ ಕೊಡಲು ಬಯಸಿದ್ದು ನಮಗೆ ಒಪ್ಪಿಗೆಯಾಗುವುದಿಲ್ಲ ಎಂದು ಹೇಳಿದ್ದರು.

Edited By : Nirmala Aralikatti
PublicNext

PublicNext

11/09/2022 07:15 pm

Cinque Terre

54.06 K

Cinque Terre

7

ಸಂಬಂಧಿತ ಸುದ್ದಿ