ಪ್ರೀತಿ, ಪ್ರೇಮ, ಜಾತಿ, ಧರ್ಮ ಮತ, ಪಂಥ ಮೀರಿದ್ದು ಅದು ಮನಸ್ಸಿನ ಭಾವನೆಗೆ ಒಳಗಾಗಿದ್ದು ಎಂಬ ಮಾತಿಗೆ ಸ್ಪಷ್ಟ ನಿರ್ದೇಶನದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಹೌದು ! ತಾನು ಪ್ರೀತಿಸುತ್ತಿದ್ದ ಯುವಕನ ಕೈ ಹಿಡಿಯುವ ಕಾರಣದಿಂದ ಮುಸ್ಲಿಂ ಯುವತಿಯೋರ್ವಳು ಹಿಂದೂ ಧರ್ಮಕ್ಕೆ ಮತಾಂತರ ಆಗಿರುವಂತಹ ಘಟನೆ ನಡೆದಿದೆ.
ರಾಜಸ್ಥಾನದ ಜೋಧಪುರದಲ್ಲಿ ವಾಸವಾಗಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಇಬ್ಬರ ನಡುವೆ ಧರ್ಮ ಅಡ್ಡಿ ಬಂದಿದೆ.
ಈ ವೇಳೆ, ಮುಸ್ಲಿಂ ಯುವತಿ ತನ್ನ ಸ್ವ ಇಚ್ಚೆಯಿಂದ ಹಿಂದೂ ಧರ್ಮ ಸ್ವೀಕರಿಸಲು ಮುಂದೆ ಬಂದಿದ್ದಾಳೆ. ಅದರಂತೆ ಚತುರ್ದಶಿ ಸಂದರ್ಭದಲ್ಲಿ ಮಂದಸೌರ್ನ ದೇವಾಲಯದಲ್ಲಿ ಅರ್ಚಕರ ಸಮ್ಮುಖದಲ್ಲಿ ಹಿಂದೂ ಧರ್ಮ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.
ಪ್ರೀತಿಗೋಸ್ಕರ ಸ್ವ-ಇಚ್ಛೆಯಿಂದ ಹಿಂದೂ ಧರ್ಮ ಸ್ವೀಕರಿಸಿ ಯುವಕನ ಕೈಹಿಡಿದ ಮುಸ್ಲಿಂ ಯುವತಿ ಮಧ್ಯಪ್ರದೇಶದ ಮಂದಸೌರ್ನ ನಿವಾಸಿ ರಾಹುಲ್ ವರ್ಮಾ ರಾಜಸ್ಥಾನದ ಜೋಧ್ಪುರದಲ್ಲಿ ವಾಸವಾಗಿದ್ದು, ನೃತ್ಯ ತರಗತಿ ನಡೆಸುತ್ತಾರೆ. ರಾಹುಲ್ ವಾಸವಾಗಿದ್ದ ಮನೆಯ ಪಕ್ಕದಲ್ಲೇ ಮುಸ್ಲಿಂ ಕುಟುಂಬವೊಂದು ವಾಸವಾಗಿದ್ದು, ಯುವತಿ ಇಕ್ರಾಬಿ ಎಂಬ ಯುವತಿಯ ಜೊತೆ ಪ್ರೀತಿ ಚಿಗುರಿದೆ.
ಪರಸ್ಪರ ಪ್ರೀತಿಸಲು ಶುರು ಮಾಡಿರುವ ಈ ಜೋಡಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಾಗ ಇಬ್ಬರ ಧರ್ಮ ಬೇರೆ ಬೇರೆ ಆದ ಕಾರಣ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಈ ವೇಳೆ ಇಕ್ರಾಬಿ ತನ್ನ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಹುಲ್ ತನ್ನ ಕುಟುಂಬದ ಮುಂದೆ ಹೇಳಿಕೊಂಡಿದ್ದು, ಅದಕ್ಕೂ ಮನೆಯವರು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಹಿಂದೂ ಧರ್ಮದ ಪ್ರಕಾರ ಮತಾಂತರ ಕಾರ್ಯ ನಡೆದಿದ್ದು, ಮದುವೆ ಸಹ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವತಿ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಒಟ್ಟಾರೆ ಹಿಂದೂ ಮುಸ್ಲಿಂ ಕುಟುಂಬದ ನಡುವೆ ಸಂಬಂಧ ಒಂದು ಮೊಳಕೆ ಒಡೆದಿದೆ.
PublicNext
10/09/2022 05:16 pm