ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ, ಶವವಾಗಿ‌ ಪತ್ತೆ

ಗದಗ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.‌

ಗ್ರಾಮದ ನಾಗಮ್ಮ ಯಂಕಪ್ಪ ಕವಲೂರು (52) ಅನ್ನೋ ಮಹಿಳೆ ಮೃತ‌ ದುರ್ದೈವಿಯಾಗಿದ್ದಾಳೆ. ಎಂದಿನಂತೆ ನಾಗಮ್ಮ ನಿನ್ನೆ ಜಮೀನಿಗೆ ತೆರಳಿದ್ದರು. ನಿನ್ನೆ ಸಂಜೆ ಮಳೆ ಆರಂಭವಾದ ನಂತರ ಸಂಜೆ ಮನೆಯತ್ತ ವಾಪಾಸ್ ಬರುವಾಗ ಹಳ್ಳಿಕೇರಿ ಗ್ರಾಮದ ಊರ ಮುಂದಿನ ಹಳ್ಳ ದಾಟುವಾಗ‌ ನೀರಿನ ಸೆಳೆವಿಗೆ ಕೊಚ್ಚಿಹೋಗಿದ್ದಾರೆಂದು ತಿಳಿದು ಬಂದಿತ್ತು.

ನಂತರ ಅಗ್ನಿಶಾಮಕ ದಳದಿಂದ ಶೋಧ‌ ಕಾರ್ಯ‌ ನಡೆಸಿದ ಬೆನ್ನಲ್ಲೇ ಇಂದು ಬೆಳಿಗ್ಗೆ ಮಹಿಳೆ ನಾಗಮ್ಮ ಶವವಾಗಿ ಪತ್ತೆಯಾಗಿದ್ದಾಳೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Edited By : Somashekar
PublicNext

PublicNext

06/09/2022 04:58 pm

Cinque Terre

82.92 K

Cinque Terre

0