ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಶಾಂತಿ- ಸೌಹಾರ್ದತೆ ಸಾರಲು 35 ದೇಶ ಸುತ್ತಲು ಸೈಕಲ್ ನಲ್ಲಿ ಹೊರಟ ಟೆಕ್ಕಿ..!

ಕಾರವಾರ: ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಸೈಕಲ್ ನಲ್ಲಿ ಸುತ್ತಿರೋರನ್ನ ನೀವು ನೋಡಿರ್ಬಹುದು, ಅವರ ಬಗ್ಗೆ ಕೇಳಿರ್ಬಹುದು. ಆದರೆ ದೇಶದಿಂದ ದೇಶಕ್ಕೆ ಸೈಕಲ್ ನಲ್ಲಿ ಸುತ್ತಾಡಿದವ್ರನ್ನ ಎಲ್ಲಾದ್ರು ನೋಡಿದ್ದೀರಾ? ಅಥವಾ ಕೇಳಿದ್ದೀರಾ? ಹೀಗೊಬ್ಬ ಯುವಕ ಸೈಕಲ್ ನಲ್ಲಿ ಲಂಡನ್ ಗೆ ಹೊರಟಿದ್ದು, ಭಟ್ಕಳದ ಮೂಲಕ ಇದೀಗ ಪ್ರಯಾಣ ಮುಂದುವರಿಸಿದ್ದಾರೆ.

ಹೌದು, ಕೇರಳದ ಕ್ಯಾಲಿಕಟ್ ನ ಫಯಿಜ್ ಅಶ್ರಫ್ ಎನ್ನುವವರೇ ಸೈಕಲ್ ನಲ್ಲಿ ದೇಶದಿಂದ ದೇಶಕ್ಕೆ ಪ್ರಯಾಣಿಸುತ್ತಿರುವವರು. ಶಾಂತಿ- ಸೌಹಾರ್ದತೆ ಮತ್ತು ಆರೋಗ್ಯ ಕಾಳಜಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಫಯಿಜ್ ಈ ಸೈಕಲ್ ಯಾತ್ರೆ ಹೊರಟಿದ್ದಾರೆ.

ಆಗಸ್ಟ್ 15ಕ್ಕೆ ಕೇರಳದ ತಿರುವನಂತಪುರಂನಿಂದ ಸೈಕ್ಲಿಂಗ್ ಆರಂಭಿಸಿರುವ ಇವರು, 35 ದೇಶಗಳನ್ನ ದಾಟಿ, 35,000 ಕಿ.ಮೀ. ಕ್ರಮಿಸಿ 450 ದಿನಗಳಲ್ಲಿ ಲಂಡನ್ ತಲುಪುವ ವಿಶ್ವಾಸ ಹೊಂದಿದ್ದಾರೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಇವರು ಈ ಹಿಂದೆ ಕೂಡ 2019ರಲ್ಲಿ ಸೈಕಲ್ ನಲ್ಲೇ ಸಿಂಗಾಪುರ ಪ್ರವಾಸ ಕೈಗೊಂಡಿದ್ದರು.

ಸದ್ಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಮುಂದೆ ಸಾಗಿರುವ ಫಯಿಜ್, 30 ದಿನಗಳಲ್ಲಿ ಭಾರತವನ್ನ ಸುತ್ತಿ, ಬಳಿಕ ಪಾಕಿಸ್ತಾನ, ಮಸ್ಕತ್, ಓಮನ್, ಯುಎಇ, ಸೌದಿ ಅರೇಬಿಯಾ, ಕ್ವಾಟರ್, ಬಹ್ರೈನ್, ಕುವೈತ್, ಇರಾಕ್, ಇರಾನ್, ಅಜರ್ ಬೈಜಾನ್, ಜಾರ್ಜಿಯಾ ಹಾಗೂ ಟರ್ಕಿ ದೇಶಗಳ ಮೂಲಕ ಲಂಡನ್ ತಲುಪಲಿದ್ದಾರೆ.

Edited By : Manjunath H D
PublicNext

PublicNext

06/09/2022 04:32 pm

Cinque Terre

29.21 K

Cinque Terre

1

ಸಂಬಂಧಿತ ಸುದ್ದಿ