ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ಜಿಲ್ಲೆಯಲ್ಲೇ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಯಡಿ ಗೋವು ದತ್ತು ಪಡೆದ ನಗರಾಧ್ಯಕ್ಷೆ ಉಷಾ ದಾಸರ

ಗದಗ: ದೇಶದ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, ಗೋವುಗಳು ಅವುಗಳ ಜೀವನಾಧಾರವಾಗಿವೆ. ಅಲ್ಲದೇ ಭಾರತೀಯ ಸಂಸ್ಕೃತಿಯಲ್ಲಿ ಮಾತೃ ಸ್ವರೂಪದಲ್ಲಿ ಕಾಣುವುದಲ್ಲದೇ ಅವನ್ನು ಪೂಜಿಸಲಾಗುತ್ತದೆ. ಹೀಗಾಗಿ ಗೋವಿನ ಸಂತತಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಇದನ್ನು ಮನಗಂಡ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ತಮ್ಮ ಮಗನ 5ನೇ ವರ್ಷದ ಜನ್ಮದಿನದ ಅಂಗವಾಗಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ 'ಪುಣ್ಯಕೋಟಿ ದತ್ತು ಯೋಜನೆ'ಯಡಿ ಮಹಾವೀರ ಜೈನ್ ಗೋ ಶಾಲೆಯಲ್ಲಿ ಗೋವನ್ನು ದತ್ತು ಪಡೆದರು.

ರಾಜ್ಯದಲ್ಲಿ ಗೋವುಗಳನ್ನು ಸಂರಕ್ಷಿಸುವ ಸಲುವಾಗಿಯೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೆ ತಂದಿರುವುದಲ್ಲದೇ, ರಾಯಭಾರಿಯನ್ನಾಗಿ ನಟ ಕಿಚ್ಚ ಸುದೀಪ್ ಅವರನ್ನು ನೇಮಕಗೊಳಿಸಿರುವುದು ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಹಕಾರಿಯಾಗಲಿದೆ.

ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಿದ ಬಳಿಕ‌ ಗದಗ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಗೋವನ್ನು ದತ್ತು ಪಡೆದುಕೊಂಡ ಉಷಾ ದಾಸರ. ಪ್ರತಿಯೊಬ್ಬರೂ ಗೋವುಗಳನ್ನು ದತ್ತು ಪಡೆಯಲು ಮುಂದಾಗಬೇಕು. ಇಂತಹ ಪುಣ್ಯದ ಕಾರ್ಯದಲ್ಲಿ ಸುಮಾರು ವರ್ಷಗಳಿಂದ ತೊಡಗಿರುವ ಮಹಾವೀರ್ ಜೈನ್ ಗೋ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ.

Edited By : Vijay Kumar
PublicNext

PublicNext

05/09/2022 06:47 pm

Cinque Terre

14.93 K

Cinque Terre

0