ಅಥಣಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಹರ್ ಘರ್ ತಿರಂಗಾ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜ ಎಲ್ಲೆಡೆಯೂ ರಾರಾಜಿಸುತ್ತಿದ್ದು ಎಲ್ಲ ದೇಶಾಭಿಮಾನಿಗಳು ಸಂಭ್ರಮದಲ್ಲಿದ್ದಾರೆ.ಈ ಘಳಿಗೆಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಇಂದು ನಮ್ಮ ಮತಕ್ಷೇತ್ರದ ತೆಲಸಂಗ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಹಿರಿಯರಾದ ಧನವಂತ ರಾಯಪ್ಪ ಹಳಿಂಗಳಿ ಇವರನ್ನು ಗೌರವಿಸಿ ಸತ್ಕರಿಸಿ ಅವರಿಂದ ಆಶೀರ್ವಾದ ಪಡೆದುಕೊಂಡೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅನಂತರ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ಅನೇಕ ಸಂಗತಿಗಳನ್ನು ವಿಚಾರಗಳನ್ನು ಅತೀ ಕುತೂಹಲದಿಂದ ಆಲಿಸಿದರು.
ಈ ವೇಳೆ ಮಲ್ಲಿಕಾರ್ಜುನ ಹಂಚಿನಾಳ, ನಿಂಗಪ್ಪ ನಂದೇಶ್ವರ, ಲೇನಿನ್ ಹಳಿಂಗಳಿ, ಬಸವರಾಜ ಕೋಳೆಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
PublicNext
14/08/2022 03:44 pm