ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಮ್ ಇಲ್ಲದ ಪೋನ್ ಕೊಟ್ಟು ತಾಯಿಯನ್ನ ರಸ್ತೆಯಲ್ಲಿ ಬಿಟ್ಟು ಹೋದ ಮಗ!

ಕೊಪ್ಪಳ: ಹೆತ್ತ ತಾಯಿಯನ್ನ ನಡು ರಸ್ತೆಯಲ್ಲಿಯೇ ಮಗ ಬಿಟ್ಟು ಹೋಗಿದ್ದಾನೆ. ಹೋಗುವಾಗ ಸಿಮ್ ಇಲ್ಲದೆ ಇರೋ ಫೋನ್ ಅನ್ನ ಕೊಟ್ಟು ಬಿಟ್ಟು ಹೋಗಿದ್ದಾನೆ. ಆದರೆ, ತಾಯಿ ಮಗ ಈಗ ಬರ್ತಾನೆ. ಆಗ ಬರ್ತಾನೆ ಅಂತ ಕಾಯುತ್ತಲೇ ಕುಳಿತಿದನ್ನ ಕಂಡು ಸ್ಥಳೀಯರು ಈ ಅಜ್ಜಿಗೆ ಸಹಾಯ ಮಾಡಿದ್ದಾರೆ.

ಹೌದು. ಈ ಘಟನೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಳಿ ನಡೆದಿದೆ. ಮಗ ಬಿಟ್ಟು ಹೋಗಿರೋ ಈ ಅಜ್ಜಿಗೆ ಸುಮಾರು 90 ವರ್ಷ ಆಗಿರಬಹುದು. ಹೆಸರು ಖಾಸೀಂಬಿ ಎಂದು ಅಜ್ಜಿ ಹೇಳಿಕೊಂಡಿದೆ.

ಬಳ್ಳಾರಿ ಜಿಲ್ಲೆಯ ಕಡೆಯ ಹಳ್ಳಿಯೊಂದರ ಈ ಅಜ್ಜಿ ದೇವಸ್ಥಾನಕ್ಕೆ ಮಗನ ಜೊತೆಗೆ ಬಂದಿದೆ.ಆದರೆ, ಮಗ ತಾಯಿಯನ್ನ ಇಲ್ಲಿಯೇ ಬಿಟ್ಟು ಹೋಗಿದ್ದಾನೆ. ಸಿಮ್ ಇಲ್ಲದ ಫೋನ್ ಕೊಟ್ಟು ಬಿಟ್ಟೇ ಹೋಗಿದ್ದಾನೆ. ಕಳೆದ 15 ದಿನಗಳಿಂದ ರಸ್ತೆಯಲ್ಲಿಯೇ ಇದ್ದ ಈ ಅಜ್ಜಿಗೆ ಸ್ಥಳೀಯರು ನೆರವಾಗಿದ್ದಾರೆ. ಹಿರಿಯ ನಾಗರಿಕರ ಇಲಾಖೆಗೂ ತಿಳಿಸಿದ್ದಾರೆ.

ಇದರಿಂದ ಅಜ್ಜಿ ಸದ್ಯ ಬಹದ್ದೂರಬಂಡಿ ರಸ್ತೆಯ ಸರುಭಿ ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿದೆ.

Edited By :
PublicNext

PublicNext

04/08/2022 02:51 pm

Cinque Terre

28.27 K

Cinque Terre

8

ಸಂಬಂಧಿತ ಸುದ್ದಿ