ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಮಂಗ ಶವಕ್ಕೆ ನೀರು ಕುಡಿಸಲು ಯತ್ನಿಸಿತು!

ಬೆಳಗಾವಿ: ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಮಂಗ ಶವಕ್ಕೆ ನೀರು ಕುಡಿಸಲು ಪ್ರಯತ್ನಿಸಿದೆ!

ಈ ಅಚ್ಚರಿಯ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ನಗರದ ಶಾಹಾಪುರ ಜೋಶಿ ಗಲ್ಲಿ ನಿವಾಸಿ ಮಾರುತಿ ಕಡಗಾಂವಕರ್(65) ಎಂಬುವರು ಮೃತಪಟ್ಟಿದ್ದಾರೆ. ಚಿತಾಗಾರಕ್ಕೆ ಶವ ತಂದಾಗ ಅಲ್ಲಿ ಬಂದ ಮಂಗ ಚಿತಾಗಾರದ ಬಲಭಾಗದಲ್ಲಿ ಸುಮಾರು ಹೊತ್ತು ಕುಳಿತಿದೆ. ಆರಂಭದಲ್ಲಿ ಮೃತರ ಸಂಬಂಧಿಕರು ಮಂಗವನ್ನು ನಿರ್ಲಕ್ಷಿಸಿದ್ದಾರೆ‌. ಆದರೆ ಆಮೇಲೆ ಮಂಗ ಶವದ‌ ಮೇಲಿನ ಸೌದೆ ಕಟ್ಟಿಗೆ ಮೇಲೆ ಕುಳಿತಿದೆ‌. ಮತ್ತು ಹೆಣವನ್ನು ಸ್ಪರ್ಶಿಸಲು ಕೂಡ ಮುಂದಾಗಿದೆ. ಮೃತ 'ಮಾರುತಿ'ಗೆ ಮಂಗವು ನೀರು ಕುಡಿಸಲು ಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

31/07/2022 08:58 pm

Cinque Terre

89.62 K

Cinque Terre

1

ಸಂಬಂಧಿತ ಸುದ್ದಿ