ನಿತ್ಯ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳದವರಿಲ್ಲ. ಜನಬಿಡ ರಸ್ತೆಯಲ್ಲಿಯಲ್ಲಂತೂ ಈ ಸಮಸ್ಯೆಯನ್ನು ಹೇಳತೀರದ್ದು. ಸದ್ಯ ಶ್ವಾನವೊಂದು ಟ್ರಾಫಿಕ್ ತಡೆದು ಮಕ್ಕಳನ್ನು ರಸ್ತೆ ದಾಟಿಸಿದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ಹೌದು ವಿಡಿಯೋದಲ್ಲಿ ಮುದ್ದಾದ ಶ್ವಾನವೊಂದು ಬೊಗಳುತ್ತಾ ವಾಹನಗಳನ್ನು ನಿಲ್ಲಿಸಿ ಮಕ್ಕಳನ್ನು ರಸ್ತೆ ದಾಟಿಸಿದೆ.
ತನ್ನದೇ ಭಾಷೇಯಲ್ಲೇ ಬೈಯುತ್ತಾ ವಾಹನಗಳಿಗೆ ಅಡ್ಡನಿಂತು ಮಕ್ಕಳನ್ನು ರಸ್ತೆ ದಾಟಿಸಿದೆ. ಜಾರ್ಜಿಯಾ ರಿಪಬ್ಲಿಕ್ ನ ಬಟುಮಿಯಲ್ಲಿ ಜನನಿಬಿಡ ರಸ್ತೆಯನ್ನು ದಾಟಲು ಮಕ್ಕಳಿಗೆ ನಾಯಿಮರಿ ಸಹಾಯ ಮಾಡಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್ ನಲ್ಲಿ ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಈ ವಿಡಿಯೋ ನೋಡಿದ ಮಂದಿ ನಾಯಿಮರಿಯ ನಡೆಗೆ ಫಿದಾ ಆಗಿದ್ದಾರೆ.
ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, 'ಎಂತಹ ಒಳ್ಳೆಯ ನಾಯಿ' ಎಂದು ಹೇಳಿದ್ದಾರೆ.
PublicNext
31/07/2022 08:32 pm