ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಯಾನ್ಸರ್ ಪೀಡಿತ ಬಾಲಕರ ಬಯಕೆ ಈಡೇರಿಸಿದ ಪೊಲೀಸರು!

ಬೆಂಗಳೂರು: ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಇಬ್ಬರು ಬಾಲಕರ ಬಹುದಿನದ ಬಯಕೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಈಡೇರಿಸಿದ್ದಾರೆ.ಕೇರಳದ ಮೊಹಮದ್ ಸಲ್ಮಾನ್ ಮತ್ತು ಬೆಂಗಳೂರಿನ ಬಿ, ಮಿಥಿಲೇಶ್ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು ಇಬ್ಬರು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಇಬ್ಬರು ಬಾಲಕರು ಪೊಲೀಸ್ ಅದಿಕಾರಿಯಾಗಬೇಕೆಂದು ಮೇಕ್ ಎ ವಿಶ್ ಇಂಡಿಯಾ ಎಂಬ ಎನ್ ಜಿ ಒ ಕಾರ್ಯಕರ್ತರ ಬಳಿ ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಅದರಂತೆ ಈ ಎನ್ ಜಿ ಒ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಜೊತೆಗೆ ಅದಕ್ಕೆ ಬೇಕಾದ ವ್ಯವಸ್ಥೆ ಕೂಡ ಮಾಡಿದ್ದರು. ಇನ್ನು ಮಕ್ಕಳ ಆಸೆ ಈಡೇರಿಸಿದ ಪೊಲೀಸ್ ಇಲಾಖೆಗೆ ಸಲಾಂ ಹೇಳಲೇಬೇಕು..

Edited By : Nirmala Aralikatti
PublicNext

PublicNext

22/07/2022 01:53 pm

Cinque Terre

44.82 K

Cinque Terre

24