ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಅನಾರೋಗ್ಯ ಪೀಡಿತ ವ್ಯಕ್ತಿಗೆ ಹೆಲ್ಪ್ ಸೊಸೈಟಿ ನೆರವು

ವರದಿ: ರಾಘವೇಂದ್ರ ದಾಸರಹಳ್ಳಿ

ಪಾವಗಡ: ಪಾವಗಡ ಪಟ್ಟಣ ವ್ಯಾಪ್ತಿಯ 23ನೇ ವಾರ್ಡಿನ ಕಣಮನ್ ಚರವು ವಾಸಿ ದಲಿತ ಜನಾಂಗದ ಅತ್ಯಂತ ಕಡು ಬಡವ ಕುಷ್ಟರೋಗ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ನೆರವು ನೀಡುವಂತೆ ಸ್ಥಳೀಯರು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಅವರನ್ನು ನೆರವನ್ನು ಕೋರಿದ್ದರು. ಈ ಮನವಿಗೆ ಸ್ಪಂದಿಸಿದ ಮಾನಂ ಶಶಿಕಿರಣ್ ಅವರು ಖುದ್ದಾಗಿ ಅನಾರೋಗ್ಯ ಪೀಡಿತರ ಮನೆಗೆ ಭೇಟಿ ನೀಡಿ ದಿನಸಿ ಪದಾರ್ಥಗಳ ಕಿಟ್ ನೀಡಿ ಹೆಚ್ಚಿನ ಚಿಕಿತ್ಸೆ ಪಡೆಯಲು ದಾನಿಗಳ ನೆರವನ್ನು ಪಡೆದು ಹಣಕಾಸು ವ್ಯವಸ್ಥೆ ಕಲ್ಪಿಸಲು ಸಹಕರಿಸುವ ಭರವಸೆ ನೀಡಿದರು.

ಅನಾರೋಗ್ಯ ಪೀಡಿತ ವ್ಯಕ್ತಿ ಈ ಹಿಂದೆ ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುವ ಸಮಯದಲ್ಲಿ ವಿಷ ಜಂತು ಹಾವು ಕಚ್ಚಿ ಅನಾರೋಗ್ಯದಿಂದ ಹಾಸಿಗೆ ಹಿಡಿಯುವಂತಾಗಿದೆ. ಕುಟುಂಬದ ಆಧಾರವಾಗಿದ್ದ ವ್ಯಕ್ತಿ ಈಗ ಹಾಸಿಗೆ ಹಿಡಿದಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಸಂತ್ರಸ್ತ ವ್ಯಕ್ತಿಯ ಪತ್ನಿ ಕಣ್ಣೀರಿಟ್ಟಿದ್ದಾರೆ.

ಹೆಲ್ಪ್ ಸೊಸೈಟಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಾಮಾಜಿಕ ಕಾರ್ಯದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಸ್ಥಳೀಯರಾದ ಆಟೋ ಗಂಗಾಧರ, ಬೆಸ್ತಾ ಶ್ರೀನಿವಾಸಲು, ಬಿಜೆಪಿಯ ಸ್ಥಳೀಯ ಮುಖಂಡ ರವಿ, ನರೇಶ್ ಸೇರಿದಂತೆ ಇತರರು ಹಾಜರಿದ್ದರು.

Edited By : Vijay Kumar
PublicNext

PublicNext

18/07/2022 01:05 pm

Cinque Terre

19.09 K

Cinque Terre

0

ಸಂಬಂಧಿತ ಸುದ್ದಿ