ಬೆಂಗಳೂರು: ರೈತ ದೇಶದ ಬೆನ್ನುಲುಬು ಅಂತಾರೆ. ಹಾಗೆಯೇ ರೈತರಿಗೆ ಎತ್ತುಗಳೇ ಆಧಾರ. ಮೊದಲೆಲ್ಲಾ ಎತ್ತುಗಳಿಲ್ಲದೆ ಕೃಷಿ ಚಟುವಟಿಕೆಗಳೆ ನಡೆಯುತ್ತಿರಲಿಲ್ಲ. ಆದರೀಗ ಆಧುನಿಕತೆಯ ಭರಾಟೆಯಲ್ಲಿ ರೈತ ಎತ್ತುಗಳಿಗಿಂತ ಟ್ರ್ಯಾಕ್ಟರ್, ಕಲ್ಟಿವೇಟರ್‌ಗಳ ಮೊರೆ ಹೋಗಿದ್ದಾನೆ. ಆದರೂ ಎತ್ತುಗಳ ಬಳಕೆ ಕಡಿಮೆಯಾಗಿಲ್ಲ. ಈಗಲೂ ಹಳ್ಳಿಕಡೆ ಎತ್ತುಗಳಿಲ್ಲದೇ ಕೃಷಿ ಚಟುವಟಿಕೆ ನಡೆಯೋದಿಲ್ಲ. ಈಗ ಪೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮಹಾರಾಷ್ಟ್ರದ ಇಂಜಿನಿಯರ್‌ಗಳಿಂದ ಎತ್ತುಗಳಿಗೆ ಭಾರ ತಗ್ಗಿಸುವ ಸಣ್ಣ ಪ್ರಯತ್ನ ನಡೆದಿದೆ. ಎತ್ತಿನ ಬಂಡಿ ಮುಂಭಾಗಕ್ಕೆ ಚಕ್ರ ಅಳವಡಿಸಿರುವುದರಿಂದ ಮುಂಭಾರ ಕಡಿಮೆ ಆಗುತ್ತಿದೆ. ಮತ್ತೆ ಚಕ್ರಕ್ಕೆ ಬ್ಲೇಡ್ ಸಸ್ಪೆನ್ಷನ್ ಅಳವಡಿಸಿದರೆ ಎತ್ತುಗಳಿಗೆ ಇನ್ನೂ ಅನುಕೂಲ. ರೈತರ ಈ ಪ್ರಯತ್ನ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಸಾರವಾಗಲಿ. ಮೂಕ ಪ್ರಾಣಿಗಳಿಗೆ ಸಹಾಯವಾಗಲಿ ಎಂಬ ಮಾತು ಜೋರಾಗೆ ಕೇಳಿಬರುತ್ತಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
14/07/2022 04:48 pm