ಬೀದರ್ : ಬೀದರ್ ನಲ್ಲಿರುವ ಭಾರತೀಯ ವಾಯುಪಡೆಯ ಸೆಂಟರ್ ನಲ್ಲಿ ತಂದೆ - ಮಗಳು ಜೊತೆಯಾಗಿ ಫೈಟರ್ ಜೆಟ್ ನ್ನು
ಹಾರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯಲ್ಲಿ ಅಪ್ಪ- ಮಗಳ ಜೋಡಿ ಪೈಟರ್ ವಿಮಾನ ಹಾರಿಸಿದೆ ಎಂದು ಐಎಎಫ್ ನಿಂದ ತಿಳಿದು ಬಂದಿದೆ.
ಐಎಎಫ್ ಕಮಾಂಡರ್ ಆಗಿರುವ ಸಂಜಯ್ ಶರ್ಮಾ ಪುತ್ರಿ ಅನನ್ನಾ ಶರ್ಮಾರನ್ನ ಸಹ ಪೈಲೆಟ್ ಆಗಿ ಪಡೆದು ಒಂದೇ ಮಾದರಿಯ ಹಾಕ್ ಸೋರ್ಟೆ ಯುದ್ಧ ವಿಮಾನ ಹಾರಿಸುವ ಮೂಲಕ ಇತಿಹಾಸ ಬರೆದಿದ್ದಾರೆ.
ಏರ್ ಕಮಾಂಡರ್ ಸಂಜಯ್ ಶರ್ಮಾ 1989ರಲ್ಲಿ ಐಎಎಫ್ ನ ಫೈಟರ್ ಸ್ಟ್ರೀಮ್ಗೆ ನಿಯೋಜಿಸಲ್ಪಿದ್ದರು. ಮಿಗ್-21 ಸ್ಕ್ವಾಡ್ರನ್ ಮತ್ತು ಮುಂಚೂಣಿ ಯುದ್ಧ ವಿಮಾನ ನಿಲ್ದಾಣಕ್ಕೆ ಕಮಾಂಡರ್ ಆಗಿ ಸಂಜಯ್ ಶರ್ಮಾ ಕಾರ್ಯನಿರ್ವಹಿಸಿದ್ದಾರೆ. ಯುದ್ಧ ವಿಮಾನಗಳ ಕಾರ್ಯಾಚರಣೆಗಳ ಅನುಭವ ಹೊಂದಿದ್ದಾರೆ. ಇನ್ನು, ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ನಲ್ಲಿ ಬಿ ಟೆಕ್ ಪದವಿ ಪಡೆದಿರುವ ಅನನ್ಯಾ ಐಎಎಫ್ ನ ತರಬೇತಿಗೆ ಆಯ್ಕೆಯಾಗಿದ್ದು, ಡಿಸೆಂಬರ್ 2021ರಲ್ಲಿ ಫೈಟರ್ ಪೈಲಟ್ ಆಗಿ ನೇಮಕಗೊಂಡಿದ್ದರು.
PublicNext
06/07/2022 02:07 pm