ಪಟ್ನಾ : ಎಲ್ಲೇಡೆ ಕೋಮು ಕೋಮು ದಳ್ಳುರಿ ಹೆಚ್ಚಾದ ಬೆನ್ನಲ್ಲೇ ಬಿಹಾರದ ಪಟ್ನಾದಲ್ಲಿ ಶವಸಂಸ್ಕಾರದ ವೇಳೆ ಮುಸ್ಲಿಮರು ಆರತಿ ಬೆಳಗಿ ರಾಮ ನಾಮ ಜಪಿಸಿ ಸೌಹಾರ್ದತೆ ಮೆರೆದಿದ್ದಾರೆ.
ಹೌದು 75 ವರ್ಷದ ರಾಮ್ ದೇವ್ ಎಂಬ ವ್ಯಕ್ತಿ ಮೃತಪಟ್ಟಾಗ ಇವರ ಶವಕ್ಕೆ ಹೆಗಲು ನೀಡಿದ್ದು ಇವರ ಮುಸ್ಲಿಂ ಸ್ನೇಹಿತರು. 25 ವರ್ಷಗಳ ಕಾಲ ಮುಸ್ಲಿಂ ಕುಟುಂಬದೊಂದಿಗೆ ವಾಸಿಸುತ್ತಿದ್ದ ರಾಮ್ ದೇವ್ ಮೃತಪಟ್ಟ ವೇಳೆ ಮುಸ್ಲಿಮರು ಹಿಂದೂ ಸಂಸ್ಕೃತಿಯ ವಿಧಿವಿಧಾನದಂತೆ ಅವರ ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ.
ಶವಯಾತ್ರೆ ಸಮಯದಲ್ಲಿ ಮೃತದೇಹಕ್ಕೆ ಹೆಗಲು ಕೊಟ್ಟು 'ರಾಮ್ ನಾಮ್ ಸತ್ಯ ಹೈ' ಎಂಬ ಘೋಷಣೆಗಳೊಂದಿಗೆ ಅಂತ್ಯಕ್ರಿಯೆಗೆ ನಡೆಸಿದ್ದಾರೆ ಈ ಮುಸ್ಲಿಂ ಸ್ನೇಹಿತರು.ಹಿಂದೂ ಸಂಪ್ರದಾಯದಂತೆ ರಾಮನ ಘೋಷಣೆ ಕೂಗುತ್ತಾ ಆರತಿ ಬೆಳಗಿ ಅಂತ್ಯ ಸಂಸ್ಕಾರ ನಡೆಸಿ ಕೊಟ್ಟ ರಾಜಾ ಬಜಾರ್ ನ ಮುಸ್ಲಿಂ ಕುಟುಂಬದ ಈ ಕಾರ್ಯಕ್ಕೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
PublicNext
03/07/2022 10:39 pm