2015 ರ UPSC ಬ್ಯಾಚ್ ನ ಎರಡನೇ ಟಾಪರ್ ಮತ್ತು IAS ಟೀನಾ ದಾಬಿ ಅವರ ಮಾಜಿ ಪತಿ, ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಅಥರ್ ಅಮೀರ್ ಖಾನ್ ಎರಡನೇ ಮದುವೆಯಾಗಲಿದ್ದಾರೆ. ಈ ವಿಚಾರವನ್ನು ಖಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಭಾವಿ ಪತ್ನಿಯ ಫೋಟೋ ಶೇರ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.
ಈಗಾಗಲೇ ನಿಶ್ಚಿತಾರ್ಥ ನೆರವೇರಿದೆ. ಅಥರ್ ಅವರು ತಮ್ಮದೇ ಸಮುದಾಯದ ಡಾ. ಮೆಹ್ರಿನ್ ಖಾಜಿ ಎಂಬುವರನ್ನು ವರಿಸಲಿದ್ದಾರೆ. ಮೆಹ್ರಿನ್ ಅವರು ಕೂಡ ಅಥರ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.ಕಾಶ್ಮೀರದ ಅನಂತನಾಗ್ ನಿವಾಸಿಗಳಾದ ಐಎಎಸ್ ಅಥರ್ ಅಮೀರ್ ಮತ್ತು ಡಾ.ಮೆಹ್ರೀನ್ ಖಾಜಿ ಶನಿವಾರ ರಾತ್ರಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನಡುವಿನ ಸಂಬಂಧವನ್ಜನು ಬಹಿರಂಗಪಡಿಸಿದ್ದಾರೆ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಡಾ.ಮೆಹ್ರೀನ್ ಶ್ರೀನಗರದ ಲಾಲ್ ಬಜಾರ್ ನಿವಾಸಿ.
ಈ ಜೋಡಿ ಈ ವರ್ಷ ಅಕ್ಟೋಬರ್ನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಖಾನ್ 7 ಏಪ್ರಿಲ್ 2018 ರಂದು ಟೀನಾ ದಾಬಿಯನ್ನು ವಿವಾಹವಾಗಿದ್ದರು. ಇಬ್ಬರು ಟಾಪರ್ ಗಳು ಐಎಎಸ್ ತರಬೇತಿ ನಂತರ 2018 ರಲ್ಲಿ ವಿವಾಹವಾದರು. ಆದರೆ, ಬಹುಚರ್ಚಿತ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಖಾನ್ ಮತ್ತು ದಾಬಿ 10 ಆಗಸ್ಟ್ 2021 ರಂದು ವಿಚ್ಛೇದನ ಪಡೆದರು.
PublicNext
03/07/2022 10:23 pm