ಮೆಕ್ಸಿಕೋ: ಕಾಡಲ್ಲಿ ಹುಲಿಯನ್ನ ನೋಡಿದ್ದೇವೆ. ಪ್ರಾಣಿ ಸಂಗ್ರಹಾಲಯದಲ್ಲೂ ಹುಲಿಯನ್ನ ಕಂಡಿದ್ದೇವೆ. ಆದರೆ, ಮನೆಗಳಿರೋ ಏರಿಯಾದಲ್ಲಿ ಡಾಗ್ ಥರ ಹುಲಿ ಓಡಾಡಿರೋದನ್ನ ಕಂಡೀರಾ ? ಇಲ್ಲವೇ ? ಬನ್ನಿ,ತೋರಿಸುತ್ತೇವೆ.
ಹೌದು. ಇದು ಮೆಕ್ಸಿಕೋ ನುರಿಯತ್ ರಾಜ್ಯದ ಟೆಕುಲಾದಲ್ಲಿ ನಡೆದ ಘಟನೆ. ಹುಲಿಯೊಂದು ಆರಾಮಾಗಿಯೇ ಓಣಿಯ ರಸ್ತೆಯಲ್ಲಿ ಓಡಾಡಿಕೊಂಡಿದೆ.
ಇದನ್ನ ಕಂಡ ಏರಿಯಾದ ಹೆಣ್ಣುಮಕ್ಕಳು ಗಾಬರಿ ಆಗಿದ್ದಾರೆ. ಹುಲಿ ಓಡಾಟವನ್ನೂ ಚಿತ್ರೀಕರಿಸಿದ್ದಾರೆ. ಅಷ್ಟರಲ್ಲಿಯೇ ಹುಲಿ ಕಾರ್ ಒಂದರ ಬಳಿ ಬಂದು ಕುಳಿತುಕೊಳ್ಳುತ್ತದೆ. ಆಗ ವ್ಯಕ್ತಿಯೊಬ್ಬ ಹಗ್ಗ ಹಿಡಿದು ಬಂದವನೇ ಅದನ್ನ ಕಟ್ಟಿಕೊಂಡು ಹೊರಟೇ ಹೋಗಿ ಬಿಡ್ತಾನೆ.
ಆದರೆ, ಅಸಲಿ ಸತ್ಯ ಏನ್ ಗೊತ್ತೇ ? ಅಕ್ರಮವಾಗಿಯೇ ಈ ಹುಲಿಯನ್ನ ಈ ವ್ಯಕ್ತಿ ಸಾಕಿದ್ದಾರೆ. ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಈ ಹುಲಿಯನ್ನ ರಕ್ಷಿಸಿದ್ದಾರೆ. ಅಂದ್ಹಾಗೆ ಈ ವೀಡಿಯೋ ಯಾವಾಗಿನದು ಅಂತ ಗೊತ್ತಿಲ್ಲ. ಆದರೆ, ವೀಡಿಯೋ ವೈರಲ್ ಆಗುತ್ತಲೇ ಇದೆ.
PublicNext
20/06/2022 06:11 pm