ರಾಯ್ಪುರ: ಬರೋಬ್ಬರಿ 108 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಕೊಳವೆ ಬಾವಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸಿದ ಘಟನೆ ಛತ್ತಿಸ್ ಘಡದಲ್ಲಿ ನಡೆದಿದೆ.ಹೌದು ಕಳೆದ ನಾಲ್ಕು ದಿನಗಳಿಂದಲೂ ಕೊಳವೆ ಬಾವಿಯಲ್ಲೇ ಸಿಲುಕಿದ್ದ 11 ವರ್ಷದ ಹುಡುಗನನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸತತ 104 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಬಾಲಕ ರಾಹುಲ್ ಸಾಹು (11) ಜಾಂಜ್ ಗೀರ್ ಚಂಪಾ ಜಿಲ್ಲೆಯ ಪಿಹ್ರಿದ್ ಗ್ರಾಮದಲ್ಲಿ ತಮ್ಮ ಮನೆಯ ಹಿಂಬದಿಯಲ್ಲೇ ಕೊರೆದಿದ್ದ 80 ಅಡಿ ಕೊಳವೆ ಬಾವಿಗೆ ಬಿದ್ದಿದ್ದ.ಇದರಿಂದ ಎನ್ ಡಿಆರ್ ಎಫ್, ಸ್ಥಳೀಯ ಪೊಲೀಸ್, ಭಾರತೀಯ ಸೇನೆ ಯೋಧರು ಹಾಗೂ ಆಡಳಿತಾಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಅಧಿಕಾರಿ ವರ್ಗ ಬಾಲಕನನ್ನು ರಕ್ಷಿಸಲು ಸತತ ಕಾರ್ಯಾಚರಣೆ ಕೈಗೊಂಡಿತ್ತು.
ಬಾಲಕನಿಗೆ ಆಮ್ಲಜನಕ ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸಲಾಗಿತ್ತು. ರಾಹುಲ್ನ ಪ್ರತಿ ನಡೆಯ ಮೇಲೆ ನಿಗಾ ಇಡಲು ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿ, ಆಹಾರ ಪದಾರ್ಥಗಳನ್ನೂ ನೀಡಲಾಗಿತ್ತು. ಸದ್ಯ ಬಾಲಕನನ್ನು ರಕ್ಷಿಸಿದ್ದು ಬಿಲಾಸ್ ಪುರ ಜಿಲ್ಲೆಯ ಅಪೊಲೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬಿಲಾಸ್ ಪುರ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
PublicNext
15/06/2022 04:39 pm