ಇತ್ತೀಚೆಗೆ ಜನ ಯಾವುದೇ ವಸ್ತುಗಳಾಗಲಿ ಅಂಗಡಿಗೆ ಹೋಗಿ ಖರೀದಿಸುವುದಕ್ಕಿಂತಲೂ ಆನ್ ಲೈನ್ ನಲ್ಲಿಯೇ ಖರೀದಿಸುವುದು ಹೆಚ್ಚು.
ಹೀಗೆ ಅಮೆರಿಕಾದ ವಿಕಿ ಉಮೊಡು ಎಂಬುವರು ತಮ್ಮ ಹೊಸ ಮನೆಗೆ ಸೋಫಾ ಸೆಟ್ ಖರೀದಿಸಲು ಆನ್ ಲೈನ್ ವೆಬ್ ಸೈಟ್ ನಲ್ಲಿ ಹುಡುಕಿದ್ದಾರೆ. ಆಗ ಅವರಿಗೆ ಸೋಫಾಸೆಟ್ ಉಚಿತವಾಗಿ ನೀಡುತ್ತಿರುವುದು ಕಂಡು ಬಂದಿದೆ.
ಮೊದಲಿಗೆ ಇದು ಗಿಮಿಕ್ ಇರಬಹುದು ಎಂದುಕೊಂಡಿದ್ದರು. ಬಳಿಕ ಸೋಫಾ ಸೆಟ್ ನೀಡುತ್ತಿರುವವನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆಗ ಮೃತರ ಕುಟುಂಬವೊಂದು ಮನೆಯ ಎಲ್ಲವನ್ನೂ ಮಾರುತ್ತಿರುವುದು ಗೊತ್ತಾಗಿದೆ. ಬಳಿಕ ವಿಕಿ ಸೋಫಾವನ್ನು ತೆಗೆದುಕೊಂಡು ಮನೆಗೆ ಬಂದಿದ್ದಾರೆ.
ಆ ವೇಳೆ ಸೋಫಾದ ಒಂದು ಭಾಗ ಸ್ವಲ್ಪ ದಪ್ಪಾವಾಗಿರುವುದು ಕಂಡಿದೆ. ಅದನ್ನು ತೆಗೆದು ನೋಡಿದಾಗ, ಒಂದಷ್ಟು ಎನ್ವಲಪ್ ಕವರ್ ಗಳು ಸಿಕ್ಕಿವೆ. ಅದನ್ನೂ ಓಪನ್ ಮಾಡಿದಾಗ ಕಂಡಿದ್ದು ಬರೋಬ್ಬರಿ 36 ಸಾವಿರ ಡಾಲರ್ ಹಣ ಸಿಕ್ಕಿದೆ. ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ 27 ಲಕ್ಷ ರೂಪಾಯಿಗಳು. ಮನೆಯವರಿಗೆಲ್ಲ ಒಂದು ಕ್ಷಣ ಆಶ್ಚರ್ಯ.
ಹೀಗೆ ಸಿಕ್ಕ 27 ಲಕ್ಷ ರೂಪಾಯಿ ಹಣವನ್ನು ವಿಕಿ ಉಮೋಡೊ ಕುಟುಂಬ ಸೋಫಾ ಮಾರಿದವರಿಗೆ ವಾಪಸ್ ನೀಡಿದ್ದಾರೆ. ಹಣ ಹಿಂದಿರುಗಿಸಿದ್ದಕ್ಕೆ ಆ ಕುಟುಂಬ ವಿಕಿ ಉಮೋಡೊಗೆ ಮರಳಿ ಹೊಸ ಫ್ರಿಡ್ಜ್ ತೆಗೆದುಕೊಳ್ಳಲು 2,200 ಡಾಲರ್ ನೀಡಿದೆ.
PublicNext
08/06/2022 10:32 am