ಅಮೆರಿಕಾ: ಅಮ್ಮ ಅನ್ನೋದು ಅದ್ಭುತ. ಅಮ್ಮನ ಒಡಲು ಅದು ಇನ್ನೂ ಅದ್ಭುತ. ಅಂತಹ ಅಮೆರಿಕದ ಅಮ್ಮ ಗರ್ಭಿಣಿ ಆಗಿದ್ದಾಗಲೇ ಗರ್ಭಧರಿಸಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದು ಆಶ್ಚರ್ಯ ಅನಿಸಿದರು ಸತ್ಯ.
ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ಒಂದು ಅಪರೂಪದ ಘಟನೆ ನಡೆದದ್ದು,ಗರ್ಭಧರಿಸಿದಾಗಲೇ ಮತ್ತೊಮ್ಮೆ ಗರ್ಭಧರಿಸಿದ್ದ ಮಹಿಳೆಯನ್ನ 30 ವರ್ಷದ ಕಾರಾ ವಿನ್‌ಹೋಲ್ಡ್ ಎಂದು ಹೇಳಲಾಗುತ್ತಿದೆ.
ಟೆಕ್ಸಾಸ್ ನಿವಾಸಿ ಆಗಿರೋ ಈ ವಿನ್ ಹೋಲ್ಡ್ ಅವರಿಗೆ ಈ ಮೊದಲೇ ಮೂರು ಸಲ ಗರ್ಭಪಾತ ಆಗಿತ್ತು. ನಾಲ್ಕನೆ ಬಾರಿ ನೀವೂ ಗರ್ಭಧರಿಸಿದ್ದಿರಿ ಅಂತ ವೈದ್ಯರು ಕನ್ಫರ್ಮ್ ಮಾಡಿದ್ದರು. ಈ ಸಂತೋಷದ ಸಮಯದಲ್ಲಿಯೇ ವೈದ್ಯರು ನೀವು ಈ ಸ್ಥಿತಿಯಲ್ಲಿ ಮತ್ತೊಮ್ಮೆ ಗರ್ಭಧರಿಸಿದ್ದಿರಿ ಅಂತಲೂ ಹೇಳಿ ಡಬಲ್ ಖುಷಿಯ ನೀಡಿದ್ದರು.
PublicNext
04/06/2022 02:47 pm